THIRTHAHALLI | ಅಡಕೆ ನುಂಗಿ ಒಂದು ವರ್ಷದ ಮಗು ಸಾವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 06 FEBRUARY 2021

ಅಡಕೆ ನುಂಗಿ ಉಸಿರು ಕಟ್ಟಿ ಮಗುವೊಂದು ಸಾವನ್ನಪ್ಪಿದೆ. ಇವತ್ತು ಬೆಳಗ್ಗೆ ಘಟನೆ ನಡೆದಿದೆ.

ತೀರ್ಥಹಳ್ಳಿ ತಾಲೂಕು ಹೆದ್ದೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಒಂದು ವರ್ಷ ಒಂದು ತಿಂಗಳ ಮಗು ನಿಶಾನ್ ಮೃತಪಟ್ಟಿದೆ. ಸಂದೇಶ ಮತ್ತು ಅರ್ಚನಾ ದಂಪತಿ ಮಗು ನಿಶಾನ್, ಆರೋಗ್ಯವಾಗಿತ್ತು. ಇವತ್ತು ಬೆಳಗ್ಗೆ ಅಡಕೆ ನುಂಗಿದ್ದರಿಂದ, ಉಸಿರುಕಟ್ಟಿದೆ. ಕೂಡಲೆ ಅಸುನೀಗಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದೇಶ್ ಅವರು ಲಾಕ್‍ ಡೌನ್ ಸಂದರ್ಭ ಊರಿಗೆ ಬಂದಿದ್ದರು. ಈಗ ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆಯಲ್ಲಿ ದುರ್ಘಟನೆ ಸಂಭವಿಸಿದೆ. ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

ಆರೋಗ್ಯ ಇಲಾಖೆ ಇತ್ತೀಚೆಗೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯವಂತ ಮಗು ಎಂದು ನಿಶಾನ್ ಪ್ರಥಮ ಬಹುಮಾನ ಗಳಿಸಿದ್ದ. ನಗದು ಪುರಸ್ಕಾರ ಲಭಿಸಿತ್ತು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment