SAGARA | 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧ, ಅದ್ಧೂರಿ ಸ್ವಾಗತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SAGARA NEWS | 08 FEBRUARY 2021

17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಮರಳಿದ ಬಿ.ಮಹೇಶ್ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದ್ದಾರೆ.

ಸಾಗರ ತಾಲೂಕು ಕರೂರು ಹೋಬಳಿಯ ಎಸ್.ಎಸ್.ಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಕೇರಿ ಗ್ರಾಮದ ಬಿ.ಮಹೇಶ್ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2004ರಲ್ಲಿ ಸೇನೆಗೆ ಸೇರಿದ ಮಹೇಶ್ ಅವರು ಜಮ್ಮು ಕಾಶ್ಮೀರ, ಪಂಜಾಬ್, ಮೈಸೂರು, ಲಡಾಕ್, ಛತ್ತೀಸ್‍ಗಢ, ದೆಹಲಿ, ಅಸ್ಸಾಂ, ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಮಹೇಶ್ ಅವರು ಸೇನೆಯಿಂದ ನಿವೃತ್ತಿ ಪಡೆದು ಊರಿಗೆ ಮರಳಿದ್ದು, ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದರು. ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧನಿಗೆ ಇಲ್ಲಿನ ಶಾಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗ್ರಾಮಸ್ಥರು, ಯುವಕರು, ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

146953764 1324229971271753 8501305438983579287 o.jpg? nc cat=104&ccb=2& nc sid=8bfeb9& nc ohc=nBuRR 0uzEkAX9221zJ& nc ht=scontent.fixe1 1

145898906 1324223917939025 3906185361258955741 n.jpg? nc cat=103&ccb=2& nc sid=8bfeb9& nc ohc=tLzDV56M1z8AX cTs59& nc ht=scontent.fixe1 1

146121859 1324223831272367 2135765132985605589 n.jpg? nc cat=101&ccb=2& nc sid=8bfeb9& nc ohc=ibWFA2l pMoAX IjIHq& nc ht=scontent.fixe1 1

146232382 1324223774605706 7456758234409546076 n.jpg? nc cat=101&ccb=2& nc sid=8bfeb9& nc ohc=e73tz8gWQyQAX8nPSWg& nc ht=scontent.fixe1 1

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment