ಭದ್ರಾವತಿಯಲ್ಲಿ ಸುಂಕದಮ್ಮ ಜಾತ್ರೆ ಜೋರು, ತಂಬಿಟ್ಟು ಆರತಿ ಬೆಳಗಿದ ಮಹಿಳೆಯರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 17 FEBRUARY 2021

ಭದ್ರಾವತಿಯಲ್ಲಿ ಸುಂಕದಮ್ಮ ಜಾತ್ರೆ ಅದ್ಧೂರಿಯಾಗಿ ನೆರವೇರಿತು. ತಾಯಿಗೆ ತಂಬಿಟ್ಟು ಆರತಿ ಬೆಳಗಿ ಮಹಿಳೆಯರು ದೇವಿಯ ಕೃಪೆಗೆ ಪಾತ್ರರಾದರು.

ನ್ಯೂ ಟೌನ್ ಹುತ್ತಾ ಕಾಲೋನಿಯ ಗೋಲ್ಡನ್ ಜೂಬ್ಲಿ ಮಹಡಿ ಮನೆಗಳ ಸಮೀಪದ ಆಟದ ಮೈದಾನದಲ್ಲಿ  ಸುಂಕದಮ್ಮ ಜಾತ್ರೆ ನಡೆಯಿತು. ಬೆಂಗಳೂರಿನ ಶಿಲ್ಪಿ ಷಣ್ಮುಗಂ ಅವರು ದೇವಿಯ ಮೂರ್ತಿಯನ್ನು ಸ್ಥಾಪಿಸಿದರು.

ಆರತಿ ಬೆಳಗಿ, ವರವ ಬೇಡಿದರು

ಭದ್ರಾವತಿಯ ವಿವಿಧ ಬಡಾವಣೆಯ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿದ್ದರು. ತಂಬಿಟ್ಟು ಆರತಿ ಬೆಳಗುವುದರಿಂದ ತಾಯಿಯ ಕೃಪೆ ಸಿಗಲಿದೆ ಎಂಬ ನಂಬಿಕೆಯಿಂದ ಆರತಿ ಬೆಳಗಿ, ವರವನ್ನು ಬೇಡಿದರು. ಕರೋನ ಮಹಾಮಾರಿಯನ್ನು ದೂರಾಗಿಸಿ ಜನರು ನೆಮ್ಮದಿಯಿಂದ ಬದುಕುವಂತಾಲಿ ಎಂದು ಬೇಡಿಕೊಂಡರು.

ಜಿಂಕ್ ಲೈನ್, ವೇಲೂರು ಶೆಡ್, ಹುತ್ತಾ ಕಾಲೋನಿ, ಜನ್ನಾಪುರ, ಸಿದ್ದಾಪುರ ಸೇರಿದಂತೆ ಸುತ್ತಮುತ್ತ ಪ್ರದೇಶದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment