ಭದ್ರಾವತಿ ಹೊಸಸಿದ್ದಾಪುರ, ಬೊಮ್ಮನಕಟ್ಟೆಯ ಎರಡು ದೇವಸ್ಥಾನದಲ್ಲಿ ಕಳ್ಳತನ, ಏನೇನು ಕಳುವಾಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 22 FEBRUARY 2021

ಭದ್ರಾವತಿಯಲ್ಲಿ ಎರಡು ದೇವಾಲಯಗಳಲ್ಲಿ ಕಳ್ಳತನವಾಗಿದೆ. ದೇವರ ಆಭರಣಗಳು, ಕಾಣಿಕೆಯನ್ನು ಕಳ್ಳರು ಕದ್ದೊಯ್ದಿದ್ದಾರೆ.

ದೇಗುಲ 1 – ಶ್ರೀ ವೀರಾಂಜನೇಯ ದೇವಸ್ಥಾನ

ಬೈಪಾಸ್ ಬಳಿ ಹೊಸಸಿದ್ದಾಪುರ ಮಾರ್ಗದಲ್ಲಿರುವ ಶ್ರೀವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಕಳ್ಳತನವಾಗಿದೆ. ದೇಗುಲದ ಬೀಗ ಮುರಿದು ದೇವರ ಬೆಳ್ಳಿಯ ಮುಖವಾಡ, ಕಂಠೀಹಾರ, ದೇವರ ಬೆಳ್ಳಿ ಹಸ್ತ ಹಾಗೂ ಪೆನ್ ಡ್ರೈವ್‍ ಕಳ್ಳತನವಾಗಿದೆ. ಫೆಬ್ರವರಿ 21ರ ರಾತ್ರಿ ಘಟನೆ ನಡೆದಿರುವ ಶಂಕೆ ಇದೆ. ನ್ಯೂ ಟೌನ್‍ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇಗುಲ 2 – ಶ‍್ರೀ ಕಾಳಿಂಗೇಶ್ವರ ದೇವಸ್ಥಾನ

ಬೊಮ್ಮನಕಟ್ಟೆಯಲ್ಲಿರುವ ಶ್ರೀಕಾಳಿಂಗೇಶ್ವರ ದೇವಾಲಯದ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಹತ್ತು ಸಾವಿರ ಮೌಲ್ಯದ  ಬಂಗಾರದ ತಾಳಿ ಹಾಗೂ ಹುಂಡಿ ಒಡೆದು ಅದರಲ್ಲಿದ್ದ ಸುಮಾರು 10 ರಿಂದ 15 ಸಾವಿರ ಕಾಣಿಕೆ ಹಣ ಕಳವು ಮಾಡಲಾಗಿದೆ. ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment