ಮೌಸ್ ಬುಕ್ ಮಾಡಲು ಹೋಗಿ 65 ಸಾವಿರ ಕಳೆದುಕೊಂಡ ಶಿವಮೊಗ್ಗದ ಬ್ಯಾಂಕ್ ಉದ್ಯೋಗಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 23 MARCH 2021
➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ಅಮೆಜಾನ್ ಹೆಲ್ಪ್ ಕೇರ್ ಪ್ರತಿನಿಧಿಯಂತೆ ನಟಿಸಿ ಕರೆ ಮಾಡಿ, ವ್ಯಕ್ತಿಯೊಬ್ಬರ ಖಾತೆಯಿಂದ 65 ಸಾವಿರ ರೂ. ವಂಚಿಸಿರುವ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ? ಹೇಗಾಯ್ತು ವಂಚನೆ?

ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯೊಬ್ಬರು ಅಮೆಜಾನ್ ಮೂಲಕ ಆನ್‍ಲೈನ್‍ನಲ್ಲಿ ಕಂಪ್ಯೂಟರ್ ಮೌಸ್ ಖರೀದಿಸಲು ಮುಂದಾದರು. ಮೂರು ಬಾರಿ ಹಣ ಸಂದಾಯವಾದರೂ ಆರ್ಡರ್ ಬುಕ್ ಆಗಿರಲಿಲ್ಲ. ಆದ್ದರಿಂದ ಅಮೆಜಾನ್ ಹೆಲ್ಪ್ ಸೆಂಟರ್‍ಗೆ ಕಾಲ್ ಬ್ಯಾಕ್ ರಿಕ್ವೆಸ್ಟ್ ಕಳುಹಿಸಿದ್ದರು.

ಕರೆ ಮಾಡಿದ್ದ ನಯ ವಂಚಕ

ಮರುದಿನ ಕರೆ ಮಾಡಿದ ವ್ಯಕ್ತಿಯಬ್ಬ ತನ್ನನ್ನು ಅಮೆಜಾನ್ ಹೆಲ್ಪ್ ಸೆಂಟರ್‍ ಪ್ರತಿನಿಧಿ ಎಂದು ಪರಿಚಯಿಸಿಕೊಂಡ. ಬಳಿಕ ವೆಬ್‍ ಸೈಟ್ ಒಂದರ ಲಿಂಕ್ ಕಳುಹಿಸಿ, ಇದರಲ್ಲಿ ಸರ್ವೆ ಒಂದನ್ನು ಭರ್ತಿ ಮಾಡುವಂತೆ ಸೂಚಿಸದ. ಅದರಂತೆ ಬ್ಯಾಂಕ್ ಉದ್ಯೋಗಿಯು ಸರ್ವೇ ಭರ್ತಿ ಮಾಡಿದ್ದರು. ಕೆಲವೇ ಹೊತ್ತಿನಲ್ಲಿ ನಿಮ್ಮ ಹಣವು ಖಾತೆಗೆ ಮರಳಲಿದೆ ಎಂದು ಆತ ತಿಳಿಸಿದ್ದ.

ಎರಡು ದಿನದ ಬಳಿಕ ಕಾದಿತ್ತು ಶಾಕ್

ಎರಡು ದಿನದ ಬಳಿಕ ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯ ಮೊಬೈಲ್ ನಂಬರ್‍ಗೆ ಮೆಸೇಜ್ ಬಂದಿದ್ದು ಮೊದಲಿಗೆ, 30 ಸಾವಿರ ರೂ. ಕಡಿತವಾಗಿದೆ. ಆ ಬಳಿಕ ಏಳು ಭಾರಿ ತಲಾ ಐದು ಸಾವಿರ ಹಣ ಕಟ್ ಅಗಿದೆ. ಪರಿಶೀಲನೆ ಬಳಿಕ ಬ್ಯಾಂಕ್ ಉದ್ಯೋಗಿಯು ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ | ಪತ್ರದಲ್ಲಿ ಇದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿ ಮೂರು ಲಕ್ಷ ಕಳೆದುಕೊಂಡ ಶಿವಮೊಗ್ಗದ ಮಹಿಳೆ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Comment