ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವತಿಗೆ ಸಾಗರದಲ್ಲಿ 2 ಗಂಟೆ ಆಪರೇಷನ್, ವೈದ್ಯರಿಗೆ ಕಾದಿತ್ತು ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

NAMMUR NEWS NEW PROMO 1 1

ಶಿವಮೊಗ್ಗ ಲೈವ್.ಕಾಂ | SAGARA NEWS | 28 MARCH 2021

ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವತಿಗೆ ಸತತ ಎರಡು ಗಂಟೆ ಆಪರೇಷನ್‌ ಮಾಡಿ, 8 ಕೆ.ಜಿ. ತೂಕದ ಗಡ್ಡೆಯನ್ನು ಹೊರ ತೆಗೆಯಲಾಗಿದೆ.

ಸಾಗರದ ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆಯಲ್ಲಿ ಆಪರೇಷನ್‌ ನಡೆಸಲಾಯಿತು. ಸೊರಬ ತಾಲೂಕಿನ 21 ವರ್ಷದ ಯುವತಿಯೊಬ್ಬಳು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಚಿಕಿತ್ಸೆಗೆ ಬಂದಾಗ ಸ್ಕ್ಯಾನಿಂಗ್‌ ನಡೆಸಲಾಗಿತ್ತು. ಆಗ ಗಡ್ಡೆ ಇರುವುದು ಗೊತ್ತಾಗಿತ್ತು.

ಎರಡು ಗಂಟೆ ಸತತ ಆಪರೇಷನ್‌

ಪ್ರಸೂತಿ ತಜ್ಞೆ ಡಾ.ಪ್ರತಿಮಾ, ಸಿವಿಲ್‌ ಸರ್ಜನ್‌ ಡಾ.ಪ್ರಕಾಶ್‌ ಬೋಸ್ಲೆ, ಸಿಬ್ಬಂದಿಗಳಾದ ರೀಟಾ, ರೋಹಿಣಿ, ಚಂದ್ರು ಸೇರಿದಂತೆ ಹಲವು ಸಿಬ್ಬಂದಿಗಳು ಅಪರೇಷನ್‌ ನಡೆಸಿದರು. ಸತತ ಎರಡು ಗಂಟೆ ಆಪರೇಷನ್‌ ನಡೆಸಿ, ಯುವತಿಯ ಹೊಟ್ಟೆಯಲ್ಲಿ ಬೆಳೆದಿದ್ದ 8 ಕೆ.ಜಿ. ತೂಕದ ಗಡ್ಡೆಯನ್ನು ಹೊರಗೆ ತೆಗೆಯಲಾಗಿದೆ.

ಕ್ಯಾನ್ಸರ್‌ಗೆ ತಿರುಗುತಿತ್ತು

ಯುವತಿಯ ಹೊಟ್ಟೆಯಲ್ಲಿ ಬೆಳೆದಿದ್ದ ಗಡ್ಡೆಯನ್ನು ಹೊರಗೆ ತೆಗೆಯದೆ ಹೋಗಿದ್ದರೆ ಕೆಲವೇ ದಿನದಲ್ಲಿ ಅದು ಕ್ಯಾನ್ಸರ್‌ ರೂಪಕ್ಕೆ ಬದಲಾಗುವ ಆತಂಕವಿತ್ತು. ಸ್ವಲ್ಪ ದಿನ ಹಾಗೆ ಬಿಟ್ಟಿದ್ದರೆ ಉಸಿರಾಟದ ಸಮಸ್ಯೆಯು ಉಂಟಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

163395055 1355441418150608 5285345126035777141 n.jpg? nc cat=108&ccb=1 3& nc sid=730e14& nc ohc=UsTWEQQMLWgAX 0dS5o& nc ht=scontent.fblr1 4

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment