ಶಿವಮೊಗ್ಗ ಜಿಲ್ಲಾಡಳಿತದ ಹೊಸ ಪ್ಲಾನ್, ಇನ್ಮುಂದೆ ಪಾಸಿಟಿವ್ ಬಂದವರು ಮನೆಗೆ ಹೋಗಂಗಿಲ್ಲ, ಖಾಸಗಿ ವಾಹನ ಬಳಸಂಗಿಲ್ಲ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 MAY 2021

ಇನ್ಮುಂದೆ ಕರೋನ ಪಾಸಿಟಿವ್ ಬಂದವರು ಮನೆಗೆ ಹೋಗುವಂತಿಲ್ಲ. ಖಾಸಗಿ ವಾಹನಗಳಲ್ಲಿ ಓಡಾಡುವಂತಿಲ್ಲ. ಮನೆ ಬಿಟ್ಟು ಹೊರ ಬರುವಂತಿಲ್ಲ.

ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಳ್ಳುತ್ತಿದೆ. ಜಿಲ್ಲೆಯಾದ್ಯಂತ ಪೊಲೀಸ್ ತಪಾಸಣೆ ವೇಳೆ ಸೋಂಕಿತರು ಪತ್ತೆಯಾಗಿ, ದಂಗುಬಡಿಸಿದ್ದರು. ಈ ಪ್ರಕರಣಗಳನ್ನು ಗಂಭೀರವಾಗಿ ಸ್ವೀಕರಿಸಿರುವ ಶಿವಮೊಗ್ಗ ಜಿಲ್ಲಾಡಳಿತ ಕೆಲವು ಕಠಿಣ ನಿರ್ಧಾರ ಕೈಗೊಂಡಿದೆ.

ಏನದು ಕಠಿಣ ಕ್ರಮಗಳು?

ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕರೋನ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸೋಂಕಿತರು ಸುಖಾಸುಮ್ಮನೆ ಹೊರಗೆ ತಿರುಗಾಡುತ್ತಿದ್ದು, ಅಂಥವರ ವಿರುದ್ಧ ನಿಗಾ ವಹಿಸಬೇಕು. ಸುಮ್ಮನೆ ಹೊರಗೆ ಸುತ್ತಾಡುತ್ತಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಆಗಿಂದಾಗ್ಗೆ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು. ಸೋಂಕಿತರಲ್ಲಿ ಅನಾಥ ಪ್ರಜ್ಞೆ ಮೂಡದಂತೆ ನೋಡಿಕೊಳ್ಳಬೇಕು ಎಂದರು.

ಹೊಸ ಪ್ಲಾನ್ ಮಾಡಿದ ಜಿಲ್ಲಾಡಳಿತ

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು, ಜಿಲ್ಲಾಡಳಿತದ ಹೊಸ ಪ್ಲಾನ್ ಕುರಿತು ತಿಳಿಸಿದರು.

ಕರೋನ ಪಾಸಿಟಿವ್ ಬಂದ ವ್ಯಕ್ತಿ ಖಾಸಗಿ ವಾಹನಗಳಲ್ಲಿ ಹೋಗುವಂತಿಲ್ಲ. ಒಂದು ವೇಳೆ ಖಾಸಗಿ ವಾಹನ ಬಳಕೆ ಮಾಡಿದರೆ ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ.

ಪಾಸಿಟಿವ್ ಎಂದು ವರದಿ ಬಂದ ತಕ್ಷಣ ಆಂಬುಲೆನ್ಸ್‍ನಲ್ಲಿ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲಾಗುತ್ತದೆ. ಮೂರು ದಿನ ಅಲ್ಲಿರಬೇಕು. ಆರೋಗ್ಯ ಪರಿಶೀಲನೆ ಬಳಿಕ ಸುಧಾರಣೆ ಕಂಡು ಬಂದರೆ ಹೋಂ ಐಸೊಲೇಷನ್‍ಗೆ ಕಳುಹಿಸಲಾಗುತ್ತದೆ. ಇಲ್ಲದಿದ್ದರೆ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ.

ಗಂಭೀರ ಸ್ಥಿತಿಯಲ್ಲಿರುವವರಿಗೆ ಮೊದಲ ಆದ್ಯತೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ತಾಲೂಕು ಕೇಂದ್ರದಲ್ಲಿ ಐಸಿಯು ಬೆಡ್ ವ್ಯವಸ್ಥೆ ಕಲ್ಪಿಸಿ ಜಿಲ್ಲಾ ಕೇಂದ್ರದ ಮೇಲೆ ಒತ್ತಡ ಕಡಿಮೆ ಮಾಡಲು ಚಿಂತನೆ ನಡೆಸಲಾಗಿದೆ.

ನೀವಿನ್ನೂ ಕರೋನ ಲಸಿಕೆ ಪಡೆದಿಲ್ಲವಾ? ಕೂಡಲೆ ಕೆಳಗಿರುವ ಫೋಟದಲ್ಲಿನ ನಂಬರ್‍ಗೆ ಕರೆ ಮಾಡಿ, ಸುರಕ್ಷಿತವಾಗಿ ಲಸಿಕೆ ಪಡೆಯಿರಿ

Covid 19 Vaccination Kan poster 1 1

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 2, 2021

ಊರಗಡೂರಿನ ಸಂಕೇತ್‌ ಸಮಾಧಿ ಒಡೆದ ದುಷ್ಕರ್ಮಿಗಳು, ಪೋಷಕರ ಆಕ್ರೋಶ

ಊರಗಡೂರಿನ ಸಂಕೇತ್‌ ಸಮಾಧಿ ಒಡೆದ ದುಷ್ಕರ್ಮಿಗಳು, ಪೋಷಕರ ಆಕ್ರೋಶ

ಶಿವಮೊಗ್ಗದಲ್ಲಿ ನಡುರಾತ್ರಿ ಮಳೆ ಅಬ್ಬರ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇಂದಿನ ಹಾವಾಮಾನ ವರದಿ

ಶಿವಮೊಗ್ಗದಲ್ಲಿ ನಡುರಾತ್ರಿ ಮಳೆ ಅಬ್ಬರ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇಂದಿನ ಹಾವಾಮಾನ ವರದಿ

ಶಿವಮೊಗ್ಗದಲ್ಲಿ ದಾರುಣ ಘಟನೆ, ಶಾಲಾ ಬಸ್‌ಗೆ ಒಂದೂವರೆ ವರ್ಷದ ಮಗು ಬಲಿ

ಶಿವಮೊಗ್ಗದಲ್ಲಿ ದಾರುಣ ಘಟನೆ, ಶಾಲಾ ಬಸ್‌ಗೆ ಒಂದೂವರೆ ವರ್ಷದ ಮಗು ಬಲಿ

ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್‌, ದಾಖಲಾಯ್ತು ಕೇಸ್

ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್‌, ದಾಖಲಾಯ್ತು ಕೇಸ್

ಗುಡ್ಡೇಕಲ್‌ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

ಗುಡ್ಡೇಕಲ್‌ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

ಭದ್ರಾವತಿಯ ಭದ್ರಾ ನದಿಗೆ ರಾಶಿ ರಾಶಿ ತ್ಯಾಜ್ಯ, ವೈಜ್ಞಾನಿಕ ಕ್ರಮಕ್ಕೆ ಒತ್ತಾಯ

ಭದ್ರಾವತಿಯ ಭದ್ರಾ ನದಿಗೆ ರಾಶಿ ರಾಶಿ ತ್ಯಾಜ್ಯ, ವೈಜ್ಞಾನಿಕ ಕ್ರಮಕ್ಕೆ ಒತ್ತಾಯ

ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

ಶಿವಮೊಗ್ಗ ಜಿಲ್ಲೆಯ ಮನೆ ಮನೆಗೂ ಭೇಟಿ ನೀಡ್ತಾರೆ ಗಣತಿದಾರರು, ಏನೇನು ಮಾಹಿತಿ ಕೊಡಬೇಕು?

ಶಿವಮೊಗ್ಗ ಜಿಲ್ಲೆಯ ಮನೆ ಮನೆಗೂ ಭೇಟಿ ನೀಡ್ತಾರೆ ಗಣತಿದಾರರು, ಏನೇನು ಮಾಹಿತಿ ಕೊಡಬೇಕು?

ಕೇಕ್‌, ಬಿಸ್ಕತ್ತು, ಕುಕೀಸ್‌ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

ಕೇಕ್‌, ಬಿಸ್ಕತ್ತು, ಕುಕೀಸ್‌ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

Leave a Comment