ಹೊಸನಗರದಲ್ಲೂ ಹಳ್ಳಿ ಹಳ್ಳಿಗೆ ವ್ಯಾಪಿಸಿದ ಕರೋನ, ಯಾವ್ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟೆಷ್ಟಿದೆ ಪ್ರಕರಣ?

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MAY 2021 ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಹೊಸನಗರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲೂ ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳಿವೆ.

ಕರೋನ ಹರಡುವುದನ್ನು ತಡೆಯಲು ತಾಲೂಕಿನ ವಿವಿಧೆಡೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಯಾವ್ಯಾವ ಹಳ್ಳಿಯಲ್ಲಿ ಎಷ್ಟಿದೆ ಕೇಸ್?

ಹೊಸನಗರ ತಾಲೂಕಿನ ಮಾರುತಿಪುರ, ರಿಪ್ಪನ್‍ಪೇಟೆಯಲ್ಲಿ 30ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಬಾಳೂರು, ಜೇನಿ, ಹೆದ್ದಾರಿಪುರ, ಎಂ.ಗುಡ್ಡೇಕೊಪ್ಪ, ಮುಂಬಾರು, ಮೂಡುಗುಪ್ಪ- ನಗರ ವ್ಯಾಪ್ತಿಯಲ್ಲಿ 20ಕ್ಕಿಂತಲೂ ಹೆಚ್ಚು ಕರೋನ ಪಾಸಿಟಿವ್ ಪ್ರಕರಣಗಳಿವೆ.

ಅಮೃತ, ಅಂಡಗದೂದೂರು, ಅರಸಾಳು, ಚಿಕ್ಕಜೇನಿ, ಕೆಂಚನಾಳ, ಹುಂಚ, ಕೋಡೂರು, ನಿಟ್ಟೂರು, ಸೋನಲೆ, ತ್ರಿಣಿವೆ ವ್ಯಾಪ್ತಿಯಲ್ಲಿ ಹತ್ತಕ್ಕು ಹೆಚ್ಚು ಸಕ್ರಿಯ ಪ್ರಕರಣಗಳಿವೆ.

ಅರಮನೆಕೊಪ್ಪ, ಬೆಳ್ಳೂರು, ಹರತಾಳು, ಹರಿದ್ರಾವತಿ, ಹೊಸೂರು, ಮೇಲಿನ ಬೆಸಿಗೆ, ರಾಮಚಂದ್ರಾಪುರ, ಯಡೂರು, ಖೈರಗುಂಡ, ಕರಿಮನೆ ವ್ಯಾಪ್ತಿಯಲ್ಲಿ ಹತ್ತಕ್ಕಿಂತಲೂ ಕಡಿಮೆ ಪ್ರಕರಣಗಳಿವೆ.

ಜನ ಜಂಗುಳಿ ಇಲ್ಲದೆ, ಸುರಕ್ಷಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ | ಫೋನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment