ಶಿವಮೊಗ್ಗ ಲೈವ್.ಕಾಂ | SHIMOGA NEWS | 15 JUNE 2021
ಪ್ರಸಿದ್ಧ ಮುಜರಾಯಿ ದೇವಸ್ಥಾನವೊಂದರ ಬೀಗ ಒಡೆದ ಕಳ್ಳರು 3 ಕೆ.ಜಿ. ಪಂಚಲೋಹದ ಬಂಗಾರ ಲೇಪಿತ ಆಭರಣಗಳನ್ನು ಕದ್ದೊಯ್ದಿದ್ದಾರೆ. ಆತುರದಲ್ಲಿ 200 ಗ್ರಾಂ ತೂಕದ ವರದ ಹಸ್ತವನ್ನು ಅಲ್ಲಿಯೆ ಬೀಳಿಸಿ ಕಳ್ಳರು ಪರಾರಿಯಾಗಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ತಾಲೂಕು ಪಿಳ್ಳಂಗಿರಿಯಲ್ಲಿರುವ ಶ್ರೀ ವಂಕಟರಮಣ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಮುಖ್ಯ ದ್ವಾರ ಮತ್ತು ಮುಖ ಮಂಟಪದ ಬಾಗಿಲಿಗೆ ಹಾಕಲಾಗಿದ್ದ ಬೀಗಗಳನ್ನು ಒಡೆದು ಕಳ್ಳರು ಕೃತ್ಯ ಎಸಗಿದ್ದಾರೆ.
ಏನೇನೆಲ್ಲ ಕದ್ದೊಯ್ದಿದ್ದಾರೆ ಕಳ್ಳರು?
ತಲಾ 500 ಗ್ರಾಂ ತೂಕದ ಕಿರೀಟ, ಶಂಖಹಸ್ತ, ಚಕ್ರಹಸ್ತ, 750 ಗ್ರಾಂ ತೂಕದ ದೇವರ ಮೇಲೆ ಹಾಕಿರುವ ಎದೆ ಕವಚ, ಎದೆ ಭಾಗದ ಲಕ್ಷ್ಮೀ ಪದಕ, ಸೂರ್ಯ ಕಟಾರ, ವರದ ಹಸ್ತ, ಕವಿ ಹಸ್ತ, ಸೊಂಟದ ಡಾಬು, ಎರಡು ದೇವರ ಪಾದಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಇವೆಲ್ಲವು ಬಂಗಾರ ಲೇಪಿತ ಪಂಚಲೋಹದಿಂದ ತಯಾರಿಸಲಾಗಿತ್ತು. ಇವುಗಳ ಅಂದಾಜು ಮೊತ್ತ 81 ಸಾವಿರ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | ದೇವಸ್ಥಾನದ ಹುಂಡಿ ಒಡೆದು ನೋಟುಗಳನ್ನಷ್ಟೆ ಕದ್ದೊಯ್ದ ಕಳ್ಳರು
ಕಳ್ಳರು ಪರಾರಿಯಾಗುವ ಸಂದರ್ಭ 200 ಗ್ರಾಂ ತೂಕದ ವರದ ಹಸ್ತವನ್ನು ಕೆಡವಿಕೊಂಡು ಹೋಗಿದ್ದಾರೆ. ಪರಿಶೀಲನೆ ವೇಳೆ ಇದು ಪತ್ತೆಯಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳು ರಾತ್ರೋರಾತ್ರಿ ಮಾಯ
ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]