ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕವಾಗಿ ಎರಡು ಹೆಸರು ಸೂಚಿಸಿದ ಸಂಘಟನೆಗಳು, ಯಾವ ಹೆಸರುಗಳು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಜುಲೈ 2021

ವಿಮಾನ ನಿಲ್ದಾಣಕ್ಕೆ  ಹೆಸರಿಡುವ ಸಂಬಂಧ ಶಿವಮೊಗ್ಗದಲ್ಲಿ ಎರಡು ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿವೆ. ಪ್ರತ್ಯೇಕವಾಗಿ ಎರಡು ಹೆಸರು ಸೂಚಿಸಿವೆ. ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ.

ವಿನೋಬನಗರ ಸ್ನೇಹ ಜೀವಿ ಬಳಗ

ವಿಮಾನ ನಿಲ್ದಾಣಕ್ಕೆ ಸಿದ್ದಗಂಗಾ ಶ್ರೀಗಳ ಹೆಸರು ಇಡುವಂತೆ ಆಗ್ರಹಿಸಿ ವಿನೋಬನಗರ ಸ್ನೇಹ ಜೀವಿ ಬಳಗ  ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ. ಲಕ್ಷಾಂತರ ಮಕ್ಕಳಿಗೆ ವಿದ್ಯೆ ಹಾಗೂ ಅನ್ನದಾನ ಮಾಡಿ ತಮ್ಮದೇ ಸಿದ್ಧಾಂತದಲ್ಲಿ ಸಿದ್ದಗಂಗಾ ಮಠ ನಡೆಸಿದ ಶ್ರೀ ಶಿವಕುಮಾರ ಸ್ವಾಮಿಗಳ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ಕಾಣಕ್ಕೆ ನಾಮಕರಣ ಮಾಡುವಂತೆ ಆಗ್ರಹಿಸಿದರು.

ಬಳಗದ ಅಧ್ಯಕ್ಷ ಶಿವಮೂರ್ತಪ್ಪ, ಶರತ್, ರಣಜಿತ್, ಹರೀಶ್, ಮಾಲತೇಶ್, ಸಂದೇಶ್, ಅಭಿನಂದನ್, ಧನಂಜಯ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

217389951 1153288501817725 4096501658035425233 n.jpg? nc cat=102&ccb=1 3& nc sid=730e14& nc ohc=NI8ByLd 2YQAX eTTxq&tn=XgSJ3kUX1No5RJvs& nc ht=scontent.fblr1 6

ಸಿಎಂ ಯಡಿಯೂರಪ್ಪ ಹೆಸರಿಡಬೇಕು

ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡಬೇಕು ಎಂದು ಕರುನಾಡ ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶಿವಮೂರ್ತಿ ಆಗ್ರಹಿಸಿದ್ದಾರೆ.

213058599 1426335257727890 8417519225074240000 n.jpg? nc cat=105&ccb=1 3& nc sid=730e14& nc ohc=sI2Cs0n2yu0AX pptTY& nc ht=scontent.fblr1 4

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಿಎಂ ಯಡಿಯೂರಪ್ಪ ಅವರು ಸಾಕಷ್ಟು ಶ್ರಮಿಸಿದ್ದಾರೆ. ಹಾಗಾಗಿ ಅವರ ಹೆಸರನ್ನೆ ಇಡುವುದು ಸೂಕ್ತ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಂಜಾನಾಯ್ಕ್, ಹೇಮಂತ್ ಕುಮಾರ್ ಇದ್ದರು.

217412964 1153466125133296 488727578606883887 n.jpg? nc cat=107&ccb=1 3& nc sid=8bfeb9& nc ohc=36gkeGQZTRYAX9upBFu& nc ht=scontent.fblr1 3

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 13, 2021

Leave a Comment