ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ, ರಿಂಗ್ ರಸ್ತೆಯಲ್ಲಿ, ಹೊಸ ಲಾರಿ ಅಪಘಾತ

ಶಿವಮೊಗ್ಗ ಲೈವ್.ಕಾಂ | 04 AUGUST 2021 ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಚಾಲಕನ ನಿಯಂತ್ರಣ ತಪ್ಪಿದ ಹೊಸ ಕ್ಯಾಂಟರ್ ಲಾರಿಯೊಂದು ಡಿವೈಡರ್ ಮೇಲೆ ಹಾರಿ ನಿಂತಿದೆ. ಅದೃಷ್ಟವಶಾತ್ ಯಾವುದೆ ಹಾನಿ ಸಂಭವಿಸಿಲ್ಲ.

ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪ, ಅಮೀರ್ ಅಹಮದ್ ಕಾಲೋನಿ ಮುಂಭಾಗ ಘಟನೆ ಸಂಭವಿಸಿದೆ. ಚಾಲಕ ಗಾಯಗೊಂಡಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಉಷಾ ನರ್ಸಿಂಗ್ ಹೋಂ ಕಡೆಯಿಂದ ಬಂದ ಕ್ಯಾಂಟರ್ ಲಾರಿ, ಅಪಘಾತಕ್ಕೀಡಾಗಿದೆ. ಅತಿ ವೇಗವಾಗಿದ್ದಿದ್ದರಿಂದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿದೆ. ಡಿವೈಡರ್‌ನ ಮಧ್ಯದಲ್ಲಿ ಲಾರಿ ಸಿಕ್ಕಿಬಿದ್ದಿದೆ. ಹೊಸ ಲಾರಿಗೆ ಇನ್ನೂ ನೋಂದಣಿ ಅಗಿಲ್ಲ.

ಹೊಸ ರಸ್ತೆ, ಲೈಟ್ ಇಲ್ಲ

ರೈಲ್ವೆ ನಿಲ್ದಾಣ ಮುಂಭಾಗ ರಿಂಗ್ ರಸ್ತೆ ನಿರ್ಮಾಣವಾಗುತ್ತಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರಸ್ತೆ ನಡುವೆ ದೀಪ ಅಳವಡಿಸುವ ಕಾರ್ಯ ಬಾಕಿ ಇದೆ.

040821 Truck Accident Near Railway Station 1
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment