ಶಿವಮೊಗ್ಗ ಜಿಲ್ಲೆಯಾದ್ಯಂತ ತಗ್ಗಿದ ಮಳೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2021

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಶಿವಮೊಗ್ಗದ ಜಿಲ್ಲೆಯ ವಿವಿಧೆಡೆ ಇವತ್ತು ಮಳೆ ಪ್ರಮಾಣ ತಗ್ಗಿದೆ. ತಂಡಿ ಗಾಳಿ ಬೀಸುತ್ತಿದ್ದು, ಆಗಾಗ ಜಿಟಿಜಿಟಿ ಮಳೆಯಾಗುತ್ತಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 13.21 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 3.80 ಮಿ.ಮೀ, ಭದ್ರಾವತಿಯಲ್ಲಿ 5.60 ಮಿ.ಮೀ, ತೀರ್ಥಹಳ್ಳಿಯಲ್ಲಿ 46.80 ಮಿ.ಮೀ, ಸಾಗರದಲ್ಲಿ 17.40 ಮಿ.ಮೀ, ಶಿಕಾರಿಪುರದಲ್ಲಿ 3.70 ಮಿ.ಮೀ, ಸೊರಬದಲ್ಲಿ 15.20 ಮಿ.ಮೀ, ಹೊಸನಗರದಲ್ಲಿ 98.80 ಮಿ.ಮೀ ಮಳೆಯಾಗಿದೆ.

Nanjappa Hospital Advertisement

ತಗ್ಗಿದ ಮಳೆ, ತಂಡಿ ಗಾಳಿ

ಶಿವಮೊಗ್ಗ ಜಿಲ್ಲೆಯಾದ್ಯಂತ ಜುಲೈ 13ರಿಂದ ಮೂರು ದಿನ ಜೋರು ಮಳೆಯಾಗಿದೆ. ಬಳಿಕ ಮಳೆ ಪ್ರಮಾಣ ಸಂಪೂರ್ಣ ತಗ್ಗಿದೆ. ಜುಲೈ 14ರಂದು ಜಿಲ್ಲೆಯಲ್ಲಿ ಸರಾಸರಿ 59 ಮಿ.ಮೀ ಮಳೆಯಾಗಿತ್ತು. ಜುಲೈ 15ರಂದು 73.59 ಮಿ.ಮೀ ಮಳೆಯಾಗಿದೆ. ಇವತ್ತು ಮಳೆ ಪ್ರಮಾಣ ಸಂಪೂರ್ಣ ತಗ್ಗಿದೆ. ಮಳೆ ಬದಲು ತಂಡಿ ಗಾಳಿ ಬೀಸುತ್ತಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment