ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜುಲೈ 2021 ➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.
ಒಂದೆಡೆ ದಿನೆ ದಿನೆ ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ವಾಹನ ಸವಾರರು ಕಂಗೆಟ್ಟು ಹೋಗಿದ್ದಾರೆ. ಈ ನಡುವೆ ಪೆಟ್ರೋಲ್ ಕಳ್ಳರ ಹಾವಳಿಯು ಹೆಚ್ಚಾಗಿದೆ. ಶಿವಮೊಗ್ಗ ನಗರದಲ್ಲಿ ಒಂದೆ ರಾತ್ರಿ ಸುಮಾರು 30 ಬೈಕ್ಗಳಿಂದ ಪೆಟ್ರೋಲ್ ಕಳುವು ಮಾಡಲಾಗಿದೆ.
ಪುರಲೆಯ ಒಕ್ಕಲಿಗರ ಬೀದಿಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಇಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳಿಂದ ಪೆಟ್ರೋಲ್ ಕಳುವು ಮಾಡಲಾಗಿದೆ.
ಪೈಪ್ ಕಟ್ ಮಾಡಿದ ಖದೀಮರು
ಬೈಕ್ಗಳ ಪೆಟ್ರೋಲ್ ಪೈಪ್ ಕಟ್ ಮಾಡಲಾಗಿದೆ. ಅದರ ಮೂಲಕ ಪೆಟ್ರೋಲ್ ಇಳಿಸಿಕೊಂಡು ಖದೀಮರು ಎಸ್ಕೇಪ್ ಆಗಿದ್ದಾರೆ. ಬೆಳಗ್ಗೆ ಬೈಕ್ ಬಳಿ ಬಂದ ಮಾಲೀಕರಿಗೆ ಪೆಟ್ರೋಲ್ ಕಳವಾಗಿರುವುದು ಗೊತ್ತಾಗಿದೆ.
ಗಸ್ತು ಹೆಚ್ಚಿಸಲು ಆಗ್ರಹ
ಒಕ್ಕಲಿಗರ ಬೀದಿ ಮತ್ತು ಅಕ್ಕಪಕ್ಕದ ಎರಡು ಬೀದಿಗಳಲ್ಲಿ ಘಟನೆ ಸಂಭವಿಸಿದೆ. ರಾತ್ರಿ ವೇಳೆ ಪೊಲೀಸರು ಸಮರ್ಪಕವಾಗಿ ಗಸ್ತು ಮಾಡದಿರುವುದೆ ಇದಕ್ಕೆ ಕಾರಣ ಎಂದು ಸ್ಥಳೀಯರಾದ ಶ್ರೀಧರ್ ಆರೋಪಿಸಿದ್ದಾರೆ. ಪೊಲೀಸರು ಮುಖ್ಯರಸ್ತೆಗೆ ಬಂದು ಹಿಂತಿರುಗುತ್ತಿದ್ದಾರೆ. ಬಡಾವಣೆಯ ಒಳಗು ಗಸ್ತು ತಿರುಗಬೇಕು ಎಂದು ಆಗ್ರಹಿಸಿದ್ದಾರೆ.
ಪೆಟ್ರೋಲ್ ಬೆಲೆ ದಿನೆ ದಿನೆ ಹೆಚ್ಚಳವಾಗುತ್ತಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಈಗ ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಾಗಿದೆ. ವಿವಿಧ ಬಡಾವಣೆಯಲ್ಲಿ ಮನೆಯಿಂದ ಹೊರಗೆ ನಿಲ್ಲಿಸಿರುವ ವಾಹನಗಳಲ್ಲಿ ಪೆಟ್ರೋಲ್ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
