ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | 23 ಫೆಬ್ರವರಿ 2019
ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದ ಸ್ಥಳದಲ್ಲಿ ಶಾಶ್ವತ ದುರಸ್ಥಿ ಕಾರ್ಯ ಕೈಗೊಳ್ಳಲುವ ಹಿನ್ನೆಲೆ, ಒಂದು ತಿಂಗಳು ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ.
ಮಾರ್ಚ್ 1 ರಿಂದ 31ರವರೆಗೆ ದುರಸ್ಥಿ ಕಾರ್ಯ ನಡೆಸಲಿದೆ. ಈ ಅವಧಿಯಲ್ಲಿ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಬೇಕು ಎಂದು ಸೂಚಿಸಲಾಗಿದೆ.
ಎಲ್ಲೆಲ್ಲಿ ದುರಸ್ಥಿ ಕಾರ್ಯ ನಡೆಯಲಿದೆ?
ಭಾರೀ ಮಳೆಗೆ ಜುಲೈ ತಿಂಗಳಲ್ಲಿ ಆಗುಂಬೆ ಘಾಟಿಯ 7ನೇ ಮತ್ತು 14ನೇ ತಿರುವು ಮತ್ತು ಆನೆಗುಡ್ಡದ ಬಳಿ ಗುಡ್ಡ ಕುಸಿತವಾಗಿತ್ತು. ಇದರಿಂದ ತೀವ್ರ ಆತಂಕ ಸೃಷ್ಟಿಯಾಗಿತ್ತು. ಎಂಟು ತಿಂಗಳ ಬಳಿಕ ಹೆದ್ದಾರಿ ಪ್ರಾಧಿಕಾರ ಶಾಶ್ವತ ದುರಸ್ಥಿಗೆ ಮುಂದಾಗಿದೆ.
ಪರ್ಯಾಯ ಮಾರ್ಗ ಯಾವುದು?
ಸಾಮಾನ್ಯ ಬಸ್ಸುಗಳು, ಜೀಪು, ಕಾರು, ಮಿನಿ ವ್ಯಾನ್ ಹಾಗೂ ದ್ವಿಚಕ್ರ ವಾಹನಗಳು ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಮಾಳಾಘಾಟಿ, ಕಾರ್ಕಳ ಹಾಗೂ ಉಡುಪಿ ಮೂಲಕ ಸಂಚರಿಸಬೇಕು.
ರಾಜಹಂಸ, ಐರಾವತ ಮತ್ತು ಖಾಸಗಿ ಬಸ್, ಬುಲೆಟ್ ಟ್ಯಾಂಕರ್, ಶಿಫ್ಟ್ ಕಾರ್ಗೊ ಕಂಟೈನರ್ ಹಾಗೂ ಲಾಂಗ್ ಚಾರ್ಸಿಯ ಭಾರೀ ವಾಹನಗಳು ತೀರ್ಥಹಳ್ಳಿ, ಯಡೂರು, ಮಾಸ್ತಿಕಟ್ಟೆ, ಹೊಸಂಗಡಿ, ಸಿದ್ಧಾಪುರ, ಕುಂದಾಪುರ ಮತ್ತು ಉಡುಪಿ ರಾಜ್ಯ ಹೆದ್ದಾರಿ 52ರ ಮೂಲಕ ಸಂಚರಿಸಬೇಕು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com

LATEST NEWS
- ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

- Three killed, several injured in soil cave-in at Hulikal Ghat

- BREAKING NEWS – ಹುಲಿಕಲ್ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

- PU RESULT: ಶಿವಮೊಗ್ಗದ ಮಹೀನ್ ಖಾನಮ್ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

- ಇವತ್ತಿನ ಅಡಿಕೆ ರೇಟ್, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

About The Editor
ನಿತಿನ್ ಆರ್.ಕೈದೊಟ್ಲು












