ಶಿವಮೊಗ್ಗ ಲೈವ್.ಕಾಂ | 25 ಫೆಬ್ರವರಿ 2019
ಜಮಾಅತೆ ಇಸ್ಲಾಮೀ ಹಿಂದ್ ಶಿರಾಳಕೊಪ್ಪ ಶಾಖೆ ವತಿಯಿಂದ ಶಿರಾಳಕೊಪ್ಪದ ಬಿ.ಎಂ.ಮಹದೇವಯ್ಯ ಬಯಲು ರಂಗಮಂದಿರದಲ್ಲಿ ಫೆಬ್ರವರಿ 27 ರಿಂದ ಮೂರು ದಿನ ಪ್ರತಿದಿನ ಸಂಜೆ 7.20 ರಿಂದ 9.30ರವರೆಗೆ ನೆಮ್ಮದಿಯ ಬದುಕಿಗಾಗಿ ಕನ್ನಡದಲ್ಲಿ ಕುರಾನ್ ಪ್ರವಚನ ನಡೆಸಲಾಗುತ್ತದೆ. ಇನ್ನು, ಪೊಲೀಸ್ ಠಾಣೆಯ ಮುಂಭಾಗದ ಖಾಲಿ ಜಾಗದಲ್ಲಿ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಮಾನವೀಯ ಮೌಲ್ಯಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯ ಅಬ್ದುಲ್ ವಾಹಿಬ್ ತಿಳಿಸಿದ್ದಾರೆ.
![]() |

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಬ್ದುಲ್ ವಾಹಿಬ್, ಫೆ.27ರ ಬೆಳಿಗ್ಗೆ 10.30ಕ್ಕೆ ಪಿಎಸ್ಐ ಹೆಚ್.ಸಿ.ವಸಂತ್ ಅವರು ಮಾನವೀಯ ಮೌಲ್ಯಗಳ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಂಜೆ ದೇವ ವಿಶ್ವಾಸ ಕುರಿತ ಪ್ರವಚನವನ್ನು ಜಡೇ ಮಠದ ಶ್ರೀ ಡಾ.ಮಹಾಂತ ಸ್ವಾಮೀಜಿ ಉದ್ಘಾಟಿಸಲಿದ್ದು, ಜಮಾಅತೆ ಇಸ್ಲಾಮೀ ಹಿಂದ್ ಕೇಂದ್ರ ಸಲಹಾ ಸಮಿತಿ ಸದಸ್ಯ ಅಕ್ಬರ್ ಆಲಿ ಉಡುಪಿ ಇವರು ಪ್ರವಚನ ನೀಡಲಿದ್ದಾರೆ ಎಂದರು.
ಫೆ.28 ರಂದು ಕೆಡುಕು ಮುಕ್ತ ಸಮಾಜ ಕುರಿತ ಪ್ರವಚನದಲ್ಲಿ ಮುಖ್ಯ ಅತಿಥಿಯಾಗಿ ಶಿಕಾರಿಪುರದ ಶ್ರೀ ಮುರುಘಾರಾಜೇಂದ್ರ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಆಗಮಿಸಲಿದ್ದು, ಮಂಗಳೂರಿನ ಶಾಂತಿ ಪ್ರಕಾಶನದ ಪ್ರಬಂಧಕ ಮುಹಮ್ಮದ್ ಕುಂಞ್ಜ ಪ್ರವಚನ ನೀಡಲಿದ್ದಾರೆ ಎಂದರು.
ಮಾ.1 ರಂದು ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ವಿಷಯ ಕುರಿತು ಪ್ರವಚನ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸಾಣೇಹಳ್ಳಿ ಮಠದ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಪನ್ಯಾಸಕ ಬಿ. ಮಂಜುನಾಥ್ ಆಗಮಿಸಲಿದ್ದಾರೆ. ಮುಹಮ್ಮದ್ ಕುಂಞ್ಜ ಪ್ರವಚನ ನೀಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೊಹಮ್ಮದ್ ಸಲೀಂ ಉಮರಿ, ಜಾಕೀರ್ ಹುಸೇನ್ ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200