ಶಿವಮೊಗ್ಗದಲ್ಲಿ ಪೊಲೀಸರ ದಾಳಿ, ಅಮೃತ್ ನೋನಿ ಹೆಸರಿನಲ್ಲಿ ನಕಲಿ ಔಷಧ ಮಾರಾಟ

ಶಿವಮೊಗ್ಗ ಲೈವ್.ಕಾಂ | SHIMOGA NEWS | 04 ಅಕ್ಟೋಬರ್ 2021 (ಈ ಸುದ್ದಿಯನ್ನು ಇನ್ನು 65 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

FOR NEWS SMG LIVE PARAGRAPH LOGOಅಮೃತ್ ನೋನಿಯನ್ನು ಹೋಲುವ ನಕಲಿ ಪ್ಯಾಕಿಂಗ್ ಮಾಡಿ ಜ್ಯೂಸ್ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಮೃತ್ ನೋನಿಯನ್ನು ಮಾರಾಟ ಮಾಡುತ್ತಿರುವ ವ್ಯಾಲ್ಯೂ ಪ್ರಾಡೆಕ್ಟ್ ಕಂಪನಿ ನೀಡಿದ ದೂರಿನ ಆಧಾರದಲ್ಲಿ ದಾಳಿ ನಡೆಸಲಾಗಿದೆ.

ಶಿವಮೊಗ್ಗದ ಮಾರ್ನಮಿ ಬೈಲಿನಲ್ಲಿರುವ ಫಾರ್ಮಾ ಸಂಸ್ಥೆ ಮೇಲೆ ದಾಳಿ ನಡೆಸಲಾಗಿದೆ. 31 ಬಾಕ್ಸ್ ನಕಲಿ ಅಮೃತ್ ನೋನಿಯನ್ನು ವಶಕ್ಕೆ ಪಡೆಯಲಾಗಿದೆ.

ಥೇಟ್ ಅಮೃತ್ ನೋನಿಯಂತಿದೆ ಪ್ಯಾಕಿಂಗ್

ದಾಳಿ ವೇಳೆ ಅಮೃತ್ ನೋನಿಯನ್ನೇ ಹೋಲುವ ನಕಲಿ ಪ್ಯಾಕಿಂಗ್ ಮಾಡಿರುವ ಬಾಟಲಿಗಳು ಪತ್ತೆಯಾಗಿವೆ. ನಕಲಿ ಅಮೃತ್ ನೋನಿ ಬಾಟಲಿಗಳನ್ನ ವಶಕ್ಕೆ ಪಡೆದು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ADVT JULY NANJAPPA HOSPITAL HOME LAB TESTING

‘ನಾವು ಆಯುಷ್ ಇಲಾಖೆಯಿಂದ ಲೈಸೆನ್ಸ್ ಪಡೆದು ಔಷಧಿ ಎಂದು ಮಾರಾಟ ಮಾಡುತ್ತಿದ್ದೇವೆ. ಇದನ್ನು ನಕಲು ಮಾಡಿ, ಮಾರಾಟ ಮಾಡುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದೇವೆ. ಪೊಲೀಸರು ದಾಳಿ ನಡೆಸಿ ನಕಲಿ ಅಮೃತ್ ನೋನಿ ಬಾಕ್ಸ್’ಗಳನ್ನು ವಶಕ್ಕೆ ಪಡೆದಿದ್ದಾರೆ’ ಎಂದು ವ್ಯಾಲ್ಯೂ ಪ್ರಾಡೆಕ್ಟ್ ಸಂಸ್ಥೆಯ ಕಾನೂನು ವಿಭಾಗದ ಶಶಿಕಾಂತ್ ನಾಡಿಗ್ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.

ಇದನ್ನೂ ಓದಿ | ಗಾಂಧಿ ಬಜಾರ್ ಕುಚಲಕ್ಕಿ ಕೇರಿಯಲ್ಲಿ ಅಂಗಡಿ ಮೇಲೆ ಪೊಲೀಸ್ ದಾಳಿ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

1632381449326627 1

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

041021 Fake Amruth Noni Raid in Shimoga

Leave a Comment