ಹೀರೋ ಆದ್ಮೇಲೆ ಪುನಿತ್ ಮೊದಲ ರಾಜ್ಯ ಪ್ರಶಸ್ತಿ ಪಡೆದಿದ್ದೇ ಶಿವಮೊಗ್ಗದಲ್ಲಿ, ಜಿಲ್ಲೆ ಜೊತೆಗಿತ್ತು ಉತ್ತಮ ನಂಟು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಅಕ್ಟೋಬರ್ 2021

ಶಿವಮೊಗ್ಗ ಜಿಲ್ಲೆಯ ಕುರಿತು ನಟ ಪುನಿತ್ ರಾಜ್ ಕುಮಾರ್ ಅವರಿಗೆ ಅಭಿಮಾನವಿತ್ತು. ಇದನ್ನು ಹಲವು ಭಾರಿ ಅವರು ಹೇಳಿಕೊಂಡಿದ್ದರು. ನಾಯಕ ನಟನಾಗಿ ಮೊಟ್ಟಮೊದಲ ಭಾರಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದೇ ಶಿವಮೊಗ್ಗದಲ್ಲಿ.

ಮಿಲನ ಸಿನಿಮಾದ ಅಭಿನಯಕ್ಕಾಗಿ ಪುನಿತ್ ರಾಜ್ ಕುಮಾರ್ ಅವರಿಗೆ ಉತ್ತಮ ನಟ ಪ್ರಶಸ್ತಿ ಲಭಿಸಿತ್ತು. 2010ರಲ್ಲಿ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪುನಿತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ವಿತರಿಸಿದ್ದರು.

ಸಿನಿಮಾ, ಮದುವೆ ಸಮಾರಂಭಗಳು

2010 ಏಪ್ರಿಲ್ | ನೆಹರೂ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಿಲನ ಸಿನಿಮಾದ ನಟನೆಗಾಗಿ ಉತ್ತಮ ನಟ ಪ್ರಶಸ್ತಿ ಪಡೆದಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಪುನಿತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದರು.

AVvXsEg7D64eppM2Y2YXBDC80Q2TdBmP2uvjR kzBF IPI

2010 ಅಕ್ಟೋಬರ್ | ಜಾಕಿ ಸಿನಿಮಾದ ಪ್ರಮೋಷನ್’ಗಾಗಿ ರಾಘವೇಂದ್ರ ರಾಜ್ ಕುಮಾರ್ ಅವರೊಂದಿಗೆ ಪುನಿತ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಅವರು ಪುನಿತ್ ರಾಜ್ ಕುಮಾರ್ ಅವರೊಂದಿಗಿದ್ದರು.

2011 ಜೂನ್ | ಹುಡುಗರು ಸಿನಿಮಾದ ಪ್ರಮೋಷನ್’ಗಾಗಿ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪವರ್ ಸ್ಟಾರ್ ಕಣ್ತುಂಬಿಕೊಳ್ಳಲು ನೂಕುನುಗ್ಗಲು ಉಂಟಾಗಿತ್ತು.

2011 ಜೂನ್ | ತೀರ್ಥಹಳ್ಳಿ ಸುತ್ತಮುತ್ತ ಪರಮಾತ್ಮ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡದ್ದರು. ಈ ವೇಳೆ ಅಪ್ಪು ಕಣ್ತುಂಬಿಕೊಳ್ಳಲು ಚಿತ್ರೀಕರಣದ ಸ್ಪಾಟ್’ಗಳಿಗೆ ಹೋಗುತ್ತಿದ್ದರು. ದಿನವಿಡಿ ಪುನಿತ್ ದರ್ಶನಕ್ಕಾಗಿ ಕಾದು ಕೂರುತ್ತಿದ್ದರು.

2015ರ ಆಗಸ್ಟ್ | ಮಲಬಾರ್ ಗೋಲ್ಡ್ ಶೋರೂಂ ಉದ್ಘಾಟನೆಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಿ.ಹೆಚ್.ರಸ್ತೆಯಲ್ಲಿ ಅಪ್ಪು ಕಣ್ತುಂಬಿಕೊಳ್ಳಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರವು ಆಗಿತ್ತು. ಅಭರಣ ಮಳಿಗೆ ಉದ್ಘಾಟಿಸಿದ ಬಳಿಕ ಪುನಿತ್ ರಾಜ್ ಕುಮಾರ್ ಅವರು ಹಾಡು ಹೇಳಿ ಅಭಿಮಾನಿಗಳು, ಜನರನ್ನು ರಂಜಿಸಿದ್ದರು.

2018 ಮಾರ್ಚ್ | ಶಿವಮೊಗ್ಗದ ಸರ್ಜಿ ಕನ್ವೆನ್ಷನ್ ಹಾಲ್’ನಲ್ಲಿ ಡಾ.ರಾಜ್ ಕುಮಾರ್ ಮೊಮ್ಮಗ ಷಣ್ಮುಕ ಮತ್ತು ಸಿಂಧು ಅವರ ಮದುವೆ ಸಮಾರಂಭ ನೆರವೇರಿತು. ಮದುವೆ ಸಮಾರಂಭದಲ್ಲಿ ಪುನಿತ್ ರಾಜ್ ಕುಮಾರ್ ಅವರು ಭಾಗವಹಿಸಿದ್ದರು. ಮದುವೆ ಮನೆಯಲ್ಲಿ ಎಲ್ಲರ ಗಮನ ಸೆಳೆದಿದ್ದರು ಪವರ್ ಸ್ಟಾರ್.

2021 ಸೆಪ್ಟೆಂಬರ್ | ಸಾಕ್ಷ್ಯಚಿತ್ರವೊಂದರ ಚಿತ್ರೀಕರಣಕ್ಕಾಗಿ ಸಕ್ರೆಬೈಲು ಆನೆ ಬಿಡಾರಕ್ಕೆ ಪುನಿತ್ ರಾಜ್ ಕುಮಾರ್ ಭೇಟಿ ನೀಡಿದ್ದರು. ಇಡೀ ದಿನ ಚತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಚಿತ್ರೀಕರಣ, ಸ್ನೇಹಿತರು, ಸಂಬಂಧಿಗಳು

ಶಿವಮೊಗ್ಗ ಜಿಲ್ಲೆಯಲ್ಲಿ ಪುನಿತ್ ರಾಜ್ ಕುಮಾರ್ ಅವರು ಹಲವು ಚಿತ್ರಗಳ ಚಿತ್ರೀಕರಣಕ್ಕೆ ಬರುತ್ತಿದ್ದರು. ಇದರ ಹೊರತಾಗಿ ಸ್ನೇಹಿತರು, ಸಂಬಂಧಿಗಳ ಭೇಟಿಗೂ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ಹಲವು ಸಂಬಂಧಿಗಳ ಮನೆಯಲ್ಲಿ ಪುನಿತ್ ರಾಜ್ ಕುಮಾರ್ ಅವರು ಉಳಿಯುತ್ತಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment