ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ನವೆಂಬರ್ 2021
ಭಾರಿ ಮಳೆ ಶಿವಮೊಗ್ಗ ನಗರದಲ್ಲಿ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಜೀವ ಭಯದಲ್ಲಿಯೇ ವಾಹನ ಚಲಾಯಿಸುವಂತೆ ಮಾಡಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ತೆಗೆದಿರುವ ಗುಂಡಿಗಳಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ.
ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಪೈಪ್, ಕೇಬಲ್ ಅಳವಡಿಕೆ, ಚರಂಡಿ ಕಾಮಗಾರಿ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಗುಂಡಿಗಳನ್ನು ಅಗೆದು ಬಿಡಲಾಗಿದೆ. ಕೆಲವು ಕಡೆ ಗುಂಡಿ ಮುಚ್ಚಿದ್ದರೂ ಮಣ್ಣು ಸರಿಯಾಗಿ ಹಾಕಿಲ್ಲ. ಮಳೆ ಸುರಿಯುತ್ತಿದ್ದಂತೆ ವಾಹನ ಸವಾರರಿಗೆ ಈ ಗುಂಡಿಗಲು ದುಸ್ವಪ್ನದಂತೆ ಕಾಡಲು ಆರಂಭಿಸಿವೆ.
ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ತೆಗೆಯಲಾಗಿದ್ದ ಗುಂಡಿಯಲ್ಲಿ ಕಾರು ಸಿಲುಕಿದೆ. ಅದೃಷ್ಟವಶಾತ್ ಯಾವುದೆ ಸಮಸ್ಯೆಯಾಗಿಲ್ಲ.
ಶಿವಮೊಗ್ಗ ನಗರ ಪ್ರಮುಖ ರಸ್ತೆಗಳಾದ ಕುವೆಂಪು ರಸ್ತೆ, ಜೈಲ್ ರೋಡ್, ಬಾಲರಾಜ ಅರಸ್ ರಸ್ತೆ, ಸವಳಂಗ ರೋಡ್, ಎಎನ್’ಕೆ ರಸ್ತೆ, ಅಚ್ಚುತರಾವ್ ಲೇಔಟ್, ವೆಂಕಟೇಶ ನಗರ ಸೇರಿದಂತೆ ವಿವಿಧೆಡೆ ಗುಂಡಿ ಅಗೆಯಲಾಗಿದೆ. ಇಲ್ಲೆಲ್ಲ ಸವಾರರು ಆತಂಕದಲ್ಲೇ ವಾಹನ ಚಲಾಯಿಸುವಂತಾಗಿದೆ.
LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು
















