ಬ್ಯಾಕೋಡು ಜೋಡಿ ಕೊಲೆ ಕೇಸ್ ಭೇದಿಸಲು ಆದ್ಯತೆ, ಒಂದು ಲೈಕ್’ಗಾಗಿ ಭವಿಷ್ಯ ಹಾಳು ಮಾಡಿಕೊಳ್ಳದಂತೆ ಸಲಹೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SAGARA NEWS | 18 ನವೆಂಬರ್ 2021

ಬ್ಯಾಕೋಡು ಜೋಡಿ ಕೊಲೆ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳನ್ನ ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾಗರ ಉಪ ವಿಭಾಗದ ಹೆಚ್ಚುವರಿ ರಕ್ಷಣಾಧಿಕಾರಿ ರೋಹನ್ ಜಗದೀಶ್ ತಿಳಿಸಿದರು.

ADVT JULY NANJAPPA HOSPITAL HOME LAB TESTING

ಸಾಗರದ ನೂತನ ಎಎಸ್’ಪಿಯಾಗಿ ಅಧಿಕಾರ ಸ್ವೀಕರಿಸಿರುವ ರೋಹನ್ ಜಗದೀಶ್ ಅವರು, ಪತ್ರಕರ್ತರೊಂದಿಗೆ ಮಾತನಾಡಿದರು. ಬ್ಯಾಕೋಡು ಜೋಡಿ ಕೊಲೆ ಪ್ರಕರಣದ ತನಿಖೆಯನ್ನು ಗಂಭೀರವಾಗಿ ಸ್ವಿಕರಿಸಿದ್ದೇವೆ. ಕೊಲೆಗಾರರನ್ನು ಹಿಡಿಯಲು ಶಕ್ತಿಮೀರಿ ಪ್ರಯತ್ನ ನಡೆಸಲಾಗುತ್ತದೆ ಎಂದರು.

ಒಂದೇ ಒಂದು ಲೈಕ್’ನಿಂದ ಕಪ್ಪುಚುಕ್ಕೆ

ಸೈಬರ್ ಅಪರಾಧಗಳ ಕುರಿತು ಯುವ ಜನರು ಎಚ್ಚರ ವಹಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಫೋಟೊ ಸೇರಿದಂತೆ ಇನ್ನಿತರೆ ಮಾಹಿತಿ ಹಂಚಿಕೊಳ್ಳುವಾಗ  ಜಾಗೃತರಾಗಿರಬೇಕು. ಒಂದು ಲೈಕ್’ಗಾಗಿ ಸಣ್ಣ ತಪ್ಪು ಮಾಡಿದರೆ ಭವಿಷ್ಯದ ಮೇಲೆ ಕಪ್ಪು ಚುಕ್ಕೆ ಬರಲಿದೆ ಎಂದು ರೋಹನ್ ಜಗದೀಶ್ ಎಚ್ಚರಿಸಿದರು.

ನೈತಿಕ ಪೊಲೀಸ್’ಗಿರಿ, ಕೋಮು ಸೌರ್ಹಾದತೆಗೆ ಧಕ್ಕೆ ತರಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮಾದಕ ವಸ್ತು ಸೇವನೆ ನಿಯಂತ್ರಣಕ್ಕೆ ಇಲಾಖೆ ಕ್ರಮ ಕೈಗೊಳ್ಳಲ್ಲಿದೆ. ಈ ಕುರಿತು ಯಾವುದೆ ಮಾಹಿತಿ ಇದ್ದರೂ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ ಎಂದು ರೋಹನ್ ಜಗದೀಶ್ ತಿಳಿಸಿದರು. ಅಲ್ಲದೆ ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸುವತ್ತ ನಿಗಾ ವಹಿಸಲಾಗುತ್ತದೆ ಎಂದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment