ಸವಳಂಗ ಬಳಿ ಭೀಕರ ಅಪಘಾತ, ಭದ್ರಾವತಿಯ ಮೂವರು ಮಹಿಳೆಯರು ಸೇರಿ ನಾಲ್ವರು ಸಾವು, ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 17 ಡಿಸೆಂಬರ್ 2021

ಸವಳಂಗ ಸಮೀಪ KSRTC ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಲಕ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆ ವೇಳೆ KSRTC ಬಸ್’ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದ್ದರಿಂದ ಬಸ್ಸಿನಲ್ಲಿದ್ದವರು ಗಾಯಗೊಂಡಿದ್ದಾರೆ.

ADVT JULY NANJAPPA HOSPITAL HOME LAB TESTING

ಸವಳಂಗ ಸಮೀಪದ ಕಲ್ಲಾಪುರ ಬಳಿ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಚಾಲಕ ಮತ್ತು ಮತ್ತೊಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಚಾಲಕ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.  ಮೃತರೆಲ್ಲ ಭದ್ರಾವತಿ ತಾಲೂಕು ಯಡೇಹಳ್ಳಿಯವರು ಎಂದು ತಿಳಿದು ಬಂದಿದೆ.

ಮದುವೆ ತೆರಳುತ್ತಿದ್ದರು

ಮೃತರೆಲ್ಲ ನ್ಯಾಮತಿಯ ಹಳೆ ಜೋಗದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆ ಸಂಚಾರ ದಟ್ಟಣೆ ಉಂಟಾಗಿತ್ತು. ನ್ಯಾಮತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

AVvXsEjsMoNJ1JeV899LynBc2wZ4SEj5womID67AydqY JpiGd4cZyjhhyzsS mDlRZkH3jr J9zDwzqkCfeV9MhnQfZ4ujwFtansMAsoAwCcl7Q1IlMGexejs7GrqqtEMqNwyBzEuZ01SCYxBBe4ub2tVxxvymH4XpIcKfIp F7dKsNVsXhSObeI148V T Q=s926

ಬಸ್ಸಿನಲ್ಲಿದ್ದವರಿಗೂ ಗಾಯ

ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾದ ಸಂದರ್ಭ, ಲಾರಿಯೊಂದು ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಬಸ್ಸಿನ ಹಿಂದೆಯೇ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ಸಿನಲ್ಲಿದ್ದ ಸುಮಾರು 15 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಘಟನೆ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

AVvXsEg N N7TkCo kQo WKwrxxIgbNEneNriesLeZsyHO4ywvL8Ocipcc1 IfFOsApMhdrkzO6h98s8Ed1 JVmugPG6EcB 94VISlyF8LtU34CzX3sP7BkMdacpd9DT LLBnZsr5AIFdgVTmlpmNDfleKTOsYkXAzco95tUy6DwuZecOKuIygIJKil0qQ4Q=s926

 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 17, 2021

Leave a Comment