ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 28 ಡಿಸೆಂಬರ್ 2021
ರಾಜ್ಯಾದ್ಯಂತ ಇವತ್ತಿನಿಂದ ನೈಟ್ ಕರ್ಫ್ಯೂ ಜಾರಿಯಾಗಲಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ನೈಟ್ ಕರ್ಫ್ಯೂಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅನಗತ್ಯ ಜನ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ. ಹತ್ತು ಗಂಟೆ ನಂತರ ಯಾವುದೆ ವ್ಯಾಪಾರ, ವಹಿವಾಟು ನಡೆಸದಂತೆ ಸರ್ಕಾರ ಆದೇಶಿಸಿದೆ. ಅನಗತ್ಯವಾಗಿ ಜನರ ಓಡಾಟವನ್ನೂ ನಿರ್ಬಂಧಿಸಲಾಗಿದೆ.
ಅರ್ಧ ಗಂಟೆ ಮೊದಲೆ ಪೊಲೀಸ್ ಎಂಟ್ರಿ
ನೈಟ್ ಕರ್ಫ್ಯೂ ಸಂದರ್ಭ ಜನ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಹತ್ತು ಗಂಟೆ ಬಳಿಕ ರಸ್ತೆಯಲ್ಲಿ ಜನ ಸಂಚಾರ ಇರದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿ 9.30ರಿಂದಲೇ ಪೊಲೀಸರು ರಸ್ತೆಗಿಳಿಯಲಿದ್ದಾರೆ. ಅಂಗಡಿಗಳನ್ನು ಬಂದ್ ಮಾಡಿಸಿ, ಜನರು ಮನೆಗಳಿಗೆ ತೆರಳುವಂತೆ ನೋಡಿಕೊಳ್ಳಲಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು, ಹತ್ತು ಗಂಟೆ ನಂತರ ನೈಟ್ ಕರ್ಫ್ಯೂ ಇರಲಿದೆ. ಆದ್ದರಿಂದ ಜನರ ಓಡಾಟಕ್ಕೆ ನಿರ್ಬಂಧವಿರುತ್ತದೆ. ಫ್ಯಾಕ್ಟರಿ ಕೆಲಸಗಾರರು, ತುರ್ತು ಸಂದರ್ಭದ ಸಂಚಾರ ಹೊರತು ಮತ್ತಿನ್ಯಾರಿಗೂ ಓಡಾಡಲು ಅವಕಾಶ ಇರುವುದಿಲ್ಲ. ಹೊಸ ವರ್ಷಾಚರಣೆಗೆ ಕೂಡ ನಿರ್ಬಂಧವಿದೆ ಎಂದು ತಿಳಿಸಿದರು.
ಅಲ್ಲಲ್ಲಿ ವಾಹನ ತಪಾಸಣೆ
ಅನಗತ್ಯವಾಗಿ ರಸ್ತೆಗಿಳಿಯುವವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಅಲ್ಲಲ್ಲಿ ವಾಹನ ತಪಾಸಣೆ ನಡೆಸಲಿದ್ದಾರೆ. ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತದೆ. ಸ್ಪಷ್ಟ ಕಾರಣವಿಲ್ಲದೆ ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಹೊಸ ವರ್ಷಾಚರಣೆ ಸಂದರ್ಭ ಕೋವಿಡ್ ಹರಡುವುದನ್ನು ತಡೆಯುವ ಸಲುವಾಗಿ ಜನವರಿ 7ರವರೆಗೆ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ.