ಕೋಟೆ ಮಾರಿಕಾಂಬ ಜಾತ್ರೆ, ಈ ಭಾರಿ ಹೇಗಿರುತ್ತೆ? ಏನೆಲ್ಲ ಸಂಪ್ರದಾಯವಿರುತ್ತೆ? ಯಾವುದಕ್ಕೆ ಅವಕಾಶವಿಲ್ಲ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಜನವರಿ 2022

ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆಯನ್ನು ಮಾರ್ಚ್ 22ರಿಂದ ನಡೆಸಲು ನಿರ್ಧರಿಸಲಾಗಿದೆ. ಈ ಭಾರಿ ಸರಳವಾಗಿ ಜಾತ್ರೆ ನಡೆಸಲಾಗುತ್ತದೆ.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ‌‌.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಜಾತ್ರೆ ಕುರಿತು ಮಹತ್ವದ ಸಂಗತಿಗಳನ್ನು ತಿಳಿಸಿದರು.

ಹೇಗಿರುತ್ತೆ ಈ ಭಾರಿಯ ಜಾತ್ರೆ?

> ಜನವರಿ 28ರ ಒಳಗೆ ಮರ ತಂದು ತವರು ಮನೆಯಲ್ಲಿ ಇಡಲಾಗುತ್ತದೆ. ಅದೇ ರೀತಿ ಪ್ರತಿ ಜಾತ್ರೆಯಲ್ಲಿ ನಡೆಯುವ ವಿಧಿವಿಧಾನ ಎಂದಿನಂತೆ ನಡೆಯಲಿದೆ. ತವರು ಮನೆಗೆ ಹೋಗುವುದು, ಬರುವುದು ಕೂಡ ಇರಲಿದೆ.

> ಶೂನ್ಯ ಮಾಸದಲ್ಲಿ ಮರ ತರುವ ಸಂಪ್ರದಾಯವಿದೆ. ಒಂದು ಭಾರಿ ಮರ ತಂದರೆ ತಾಯಿಯನ್ನು ಕೂರಿಸಲೇಬೇಕು, ಪೂಜೆ ನಡೆಸಬೇಕಾಗುತ್ತದೆ.

> ಅವತ್ತಿನ ಪರಿಸ್ಥಿತಿಗೆ ಅನುಗುಣವಾಗಿ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗುತ್ತದೆ. ನಾಗರಿಕರಿಗೆ ತೊಂದರೆ ಆಗದಂತೆ ವಿಧಿವಿಧಾನ ನೆರವೇರಿಸಲಾಗುತ್ತದೆ‌.

> ಹರಕೆ ಮಾಡುವುದು, ಬೇವಿನ ಉಡುಗೆ ತೊಡಿಸುವುದು ಸೇರಿದಂತೆ ಭಕ್ತರಿಗೆ ಯಾವುದೆ ಪೂಜೆಗಳಿಗೂ ತೊಂದರೆ ಮಾಡುವುದಿಲ್ಲ. ಎರಡು ವರ್ಷಕ್ಕೆ ಒಮ್ಮೆ ನಡೆಯುವ ಜಾತ್ರೆ ಆಗಿರುವುದರಿಂದ ಭಕ್ತರಿಗೆ ಯಾವುದೆ ತೊಂದರೆ ಆಗದ ಹಾಗೆ ಸರಳವಾಗಿ ಆಚರಣೆ ಮಾಡಲಾಗುತ್ತದೆ.

> ಸರಳವಾಗಿ ಆಚರಣೆ ಮಾಡುವಂತೆ ಜಿಲ್ಲಾಡಳಿತ ತಿಳಿಸಿದೆ. ಅಂಗಡಿಗಳು, ಎಗ್ಸಿಬಿಷನ್ ಸೇರಿದಂತೆ ಯಾವುದೆ ಚಟುವಟಿಕೆ ಇರುವುದಿಲ್ಲ.

> ಮಾರ್ಚ್ 22ರಂದು ಜಾತ್ರೆ ಆರಂಭವಾಗಲಿದೆ. ಆದರೆ ಎಷ್ಟು ದಿನ ಜಾತ್ರೆ ನಡೆಯಲಿದೆ ಎಂಬುದು ಇನ್ನೂ ನಿರ್ಧಾರವಾಗಬೇಕಿದೆ. ಆಗಿನ ಪರಿಸ್ಥಿತಿಗೆ ಅನುಗುಣವಾಗಿ ಮೂರು ದಿನವೋ, ಐದು ದಿನವೋ ಎಂಬುದು ನಿಗದಿಯಾಗಲಿದೆ.

> ಜಾತ್ರೆ ಕುರಿತು ಮತ್ತೊಂದು ಸಭೆ ನಡೆಸಲಾಗುತ್ತದೆ. ದೇಗುಲದ ಬಳಿ ಜನ ಸಂದಣಿ ಆಗದ ಹಾಗೆ ನೋಡಿಕೊಳ್ಳಬೇಕಿದೆ. ಈ ಬಗ್ಗೆ ಯೋಚನೆ ಮಾಡಲಾಗುತ್ತಿದೆ.

‘ಸಂಪ್ರದಾಯಬದ್ಧ ಜಾತ್ರೆ ಮಾಡೋಣ’

ಸಮಿತಿಯ ಗೌರವಾಧ್ಯಕ್ಷೆ, ಶಿವಮೊಗ್ಗ ಮೇಯರ್ ಸುನೀತಾ ಅಣ್ಣಪ್ಪ ಮಾತನಾಡಿ, ಪಾಲಿಕೆ ವತಿಯಿಂದ ಜಾತ್ರೆಗೆ ಹತ್ತು ಲಕ್ಷ ರೂ. ಒದಗಿಸಲಾಗುತ್ತೆದೆ. ಕರೋನ ಸೋಂಕಿನ ತೀವ್ರತೆಗೆ ಅನುಗುಣವಾಗಿ ಜಾತ್ರೆ ನಡೆಸಬೇಕಿದೆ ಎಂದು ತಿಳಿಸಿದರು.

ಮಾರಿಕಾಂಬ ಸೇವಾ ಸಮಿತಿ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

AVvXsEgP5 JNPK2j1ZC zx WDpLlWYxd8Rh mwi bzEdwSs6BeN6rSt40jlxJDYOSA6B9iqqK1U2Mp7zrkuXlpOBIEnXtPxZSscBkHvcj2FAYc6SuvKZbgHSaUhgRtVPqfL2ok2KnyA2 JrmuP6XIRbiRiZKPYHHS7aXi7LU5fcUGUpqad26ZWjcn29oOwCGw

AVvXsEhMLrZJF6FVBHpAz1 Th79MF8 nk1kB8YJf7EcFFc5QA4x5lwRWKq2lPB1GXvoKy99eovKBsVRghkPnLmbCuzGgjILoMWD TBfccLuuDAj1szPxKpAFI ubyiEdHWN2 OOt6XmcLQ6sO5M pZKAJ5wQQc7bV6VpDlTgOcH26BzSnzbiGVjNEH5Yz4AeGQ

AVvXsEgjNcxkrAuExQ408iM6U1TzE 6KcjKNOK0NHUOOgV3WEhdDD0hojjN8zErOTGGqxX9Fqe4FXR lE3f7Tj p qO8Plu1FBJCyUb9iKcJcjiDZZT0L15tuCqR mOA6G7xZPyhOavfmcdE3M8kphp24 bULvgY1wGnIST8YmGgZA6bhU6ASNY1K4fSRFuHw

ABOUT NEW DEC 2021 REPORT

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 19, 2022

Leave a Comment