ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | ಭದ್ರಾವತಿ NEWS | 30 ಜನವರಿ 2022
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ವ್ಯಕ್ತಿಯೊಬ್ಬರು ರೈಲು ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪ್ರಕಾಶ್ ಪುಂಡಲೀಕ ಶಾನುಭೋಗ (55) ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ತಾಳಗುಪ್ಪ – ಬೆಂಗಳೂರು ರೈಲು ಹತ್ತುವಾಗ ಘಟನೆ ಸಂಭವಿಸಿದೆ.
ಭದ್ರಾವತಿ ನಿಲ್ದಾಣದಲ್ಲಿ ಹೇಗಾಯ್ತು ಆವಘಡ?
ತಾಳಗುಪ್ಪ ರೈಲಿನಲ್ಲಿ ಬಂದಿದ್ದ ಪ್ರಕಾಶ್ ಪುಂಡಲೀಕ ಶಾನುಭೋಗ ಅವರು ರೈಲು ನಿಲ್ದಾಣದಲ್ಲಿ ಇಳಿದಿದ್ದರು. ರೈಲು ಹೊರಡುತ್ತಿದ್ದಂತೆ ಅವರು ಅವಸರದಲ್ಲಿ ರೈಲು ಹತ್ತಲು ಮುಂದಾಗಿದ್ದಾರೆ.
ಇದನ್ನೂ ಓದಿ | ರೈಲಿಗೆ ಸಿಲುಕಿ ವ್ಯಕ್ತಿ ಸಾವು
ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಪ್ರಕಾಶ್ ಪುಂಡಲೀಕ ಶಾನುಭೋಗ ಅವರು ಕೆಳಗೆ ಬಿದ್ದಿದ್ದಾರೆ. ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.