ರಾತ್ರೋರಾತ್ರಿ ಕೊಳವೆ ಬಾವಿ ಮೊಟರ್ ಕೇಬಲ್, ಬ್ಯಾಟರಿ ಕಳವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2022

ಜಮೀನಿನಲ್ಲಿದ್ದ ಕೊಳವೆ ಬಾವಿಯ ಮೋಟರ್’ಗೆ ಅಳವಡಿಸಿದ್ದ ಕೇಬಲ್ ವೈರ್ ಮತ್ತು ಬ್ಯಾಟರಿಯನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಣಿದಾಳು ಗ್ರಾಮದಲ್ಲಿ ಘಟನೆ ಸಂಭವಿಸಿದೆ.

Shimoga Nanjappa Hospital Covid Care Center

ಗಾಣಿದಾಳು ಗ್ರಾಮದ ನಾಗರಾಜು ಎಂಬುವವರ ಜಾಮೀನನಲ್ಲಿ ಕೊಳೆವೆ ಬಾವಿ ತೆಗೆಸಿದ್ದರು. ಜಮೀನಿಗೆ ನೀರು ಹಾಯಿಸಲು ಆಟೋ ಸ್ಟಾರ್ಟರ್ ಮೋಟರ್ ಅಳವಡಿಸಲಾಗಿದೆ. ರಾತ್ರಿ ನಾಗರಾಜ್ ಅವರು ಮೋಟರ್ ಸ್ವಿಚ್ ಆನ್ ಮಾಡಿ ಬಂದಿದ್ದರು.

ಬೆಳಗ್ಗೆ ಜಮೀನಿಗೆ ಹೋಗಿ ನೋಡಿದಾಗ ಮೋಟರ್ ಆನ್ ಆಗಿರಲಿಲ್ಲ. ಪರಿಶೀಲನೆ ನಡೆಸಿದಾಗ ಮೋಟರ್’ಗೆ ಅಳವಡಿಸಿದ್ದ ಸುಮಾರು 300 ಅಡಿ ಉದ್ದದ ಕೇಬಲ್ ಮತ್ತು ಬ್ಯಾಟರಿ ನಾಪತ್ತೆಯಾಗಿತ್ತು. ಇದರ ಮೌಲ್ಯ 20 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಹಣಗೆರೆಯಲ್ಲಿ ಪೂಜೆ ಮುಗಿಸಿ ಹೊರ ಬಂದ ಹಾವೇರಿಯ ಭಕ್ತರಿಗೆ ಶಾಕ್

Shimoga Live News Map Wise Graphics

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment