ಮಳಿಗೆಗಳ ಮುಂದೆ ರಾರಾಜಿಸಿದ ಕೇಸರಿ ಧ್ವಜ, ಜಾತ್ರೆಯಲ್ಲೂ ಹಿಂದೂ ಹರ್ಷ ಸ್ಮರಣೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 23 ಮಾರ್ಚ್ 2022

ಜಾತ್ರೆ ಅಂಗವಾಗಿ ಸ್ಥಾಪಿಸಿರುವ ಮಳಿಗೆಗಳ ಮೇಲೆ ರಾರಾಜಿಸಿದ ಕೇಸರಿ ಧ್ವಜ. ಜಾತ್ರೋತ್ಸವದಲ್ಲೂ ಬಜರಂಗದಳ ಕಾರ್ಯಕರ್ತ ಹರ್ಷಗೆ ನಮನ.

Shimoga Nanjappa Hospital

ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯ ಮಳಿಗೆಗಳ ಸ್ಥಾಪನೆ ವಿಚಾರ ಗೊಂದಲಕ್ಕೆ ಕಾರಣವಾಗಿತ್ತು. ಅನ್ಯ ಧರ್ಮಿಯರಿಗೆ ಮಳಿಗೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು.

ಅಂಗಡಿಗಳ ಮೇಲೆ ರಾರಾಜಿಸಿದ ಕೇಸರಿ

ಜಾತ್ರೆಯಲ್ಲಿ ಅಂಗಡಿಗಳ ಸಂಖ್ಯೆ ಕಡಿಮೆ ಇದೆ. ಸುಮಾರು ನೂರು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ‘ಈ ಭಾರಿ ಹಿಂದೂ ಧರ್ಮಿಯರಿಗೆ ಮಾತ್ರ ಮಳಿಗೆ ಸ್ಥಾಪನೆಗೆ ಅವಕಾಶ ನೀಡಲಾಗಿದೆ. ಒಂದೇ ಒಂದು ಮಳಿಗೆ ಕೂಡ ಅನ್ಯ ಧರ್ಮಿಯರದ್ದಿಲ್ಲ’ ಎಂದು ಹಿಂದೂ ಸಂಘಟನೆಗಳ ಮುಖಂಡ ದೀನದಯಾಳು ತಿಳಿಸಿದ್ದಾರೆ.

ಜಾತ್ರೆ ಅಂಗವಾಗಿ ಸ್ಥಾಪನೆ ಮಾಡಿರುವ ಪ್ರತಿ ಅಂಗಡಿಗಳ ಮುಂದೆ ಕೇಸರಿ ಧ್ವಜ ರಾರಾಜಿಸುತ್ತಿವೆ. ಎಲ್ಲಾ ಮಳಿಗೆಗಳ ಮೇಲೆ ಭಗವಾಧ್ವಜ ಕಟ್ಟಲಾಗಿದೆ. ಹಿಂದೂಗಳಿಗೆ ಮಾತ್ರ ಮಳಿಗೆ ನೀಡಲಾಗಿದೆ ಎಂಬುದರ ಸಂಕೇತವಾಗಿ ಧ್ವಜಗಳನ್ನು ಕಟ್ಟಲಾಗಿದೆ.

ಜಾತ್ರೆಯಲ್ಲೂ ಹರ್ಷಗೆ ನಮನ

ಇತ್ತೀಚೆಗೆ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷಗೆ ಮಾರಿ ಜಾತ್ರೆಯಲ್ಲೂ ನಮನ ಸಲ್ಲಿಸಲಾಯಿತು. ಕೋಟೆ ಮಾರಿಕಾಂಬ ದೇವಿ ದೇವಸ್ಥಾನದ ಬಳಿ ಹರ್ಷ ಸ್ಮರಣೆಯಲ್ಲಿ ಫ್ಲೆಕ್ಸ್ ಕಟ್ಟಲಾಗಿದೆ. ಇನ್ನು, ಜಾತ್ರೆಯ ಕೆಲವು ಮಳಿಗೆಗಳಲ್ಲೂ ಹರ್ಷನ ಭಾವ ಚಿತ್ರಗಳನ್ನು ಹಾಕಲಾಗಿದೆ.

Marikamba Jathre

Marikamba Jathre

ಇದನ್ನೂ ಓದಿ |  ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

Shimoga Marikamba Jathre

KB Prasanna Kumar

JNNCE college VTU

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 23, 2022

Leave a Comment