ಚಿನ್ನಾಭರಣ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಹುದ್ದೆಗಳಿಗೆ ನೇರ ಸಂದರ್ಶನ, ಯಾವಾಗ? ಎಷ್ಟಿರಲಿದೆ ಸಂಬಳ?

Published On : ಮಾರ್ಚ್ 12, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಪ್ರಖ್ಯಾತ ಚಿನ್ನಾಭರಣ ಸಂಸ್ಥೆಯಾದ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ (National Gold and Diamond) ತನ್ನ ಶಿವಮೊಗ್ಗ ಮತ್ತು ತೀರ್ಥಹಳ್ಳಿ ಮಳಿಗೆಗಳಿಗಾಗಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 50ಕ್ಕೂ ಹೆಚ್ಚು ಹುದ್ದೆಗಳಿಗೆ (Hiring) ನೇರ ಸಂದರ್ಶನ ನಡೆಯಲದೆ. ಆಸಕ್ತರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.

ಯಾವೆಲ್ಲ ಹುದ್ದೆಗಳಿವೆ?

ಸೀನಿಯರ್ ಸೇಲ್ಸ್ ಎಕ್ಸಿಕ್ಯೂಟಿವ್ಸ್ (20 ಹುದ್ದೆಗಳು): ಪದವಿ ಹಾಗೂ ಚಿನ್ನ/ಬೆಳ್ಳಿ/ವಜ್ರಾಭರಣ ಮಾರಾಟ ವಿಭಾಗದಲ್ಲಿ ಕನಿಷ್ಠ 2 ವರ್ಷದ ಅನುಭವ.

Shivamogga-Job-Update

ಜೂನಿಯರ್ ಸೇಲ್ಸ್ ಎಕ್ಸಿಕ್ಯೂಟಿವ್ಸ್ (25 ಹುದ್ದೆಗಳು): ಪದವೀಧರರಿಗೆ ಅವಕಾಶ.

ಕ್ಯಾಶಿಯರ್ ಹಾಗೂ ಬಿಲ್ಲಿಂಗ್ ಸ್ಟಾಫ್: ತಲಾ 2 ಹುದ್ದೆಗಳು.

ಕಸ್ಟಮರ್ ರಿಲೇಶನ್‌ಶಿಪ್ ಎಕ್ಸಿಕ್ಯೂಟಿವ್ಸ್: 2 ಹುದ್ದೆಗಳು (ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ).

ಹೌಸ್‌ಕೀಪಿಂಗ್ ಮತ್ತು ರಿಫ್ರೆಶ್‌ಮೆಂಟ್ ಸ್ಟಾಫ್: ತಲಾ 2 ಹುದ್ದೆಗಳು.

ಚಾಲಕರು: 2 ಹುದ್ದೆಗಳು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ಸಂಬಳ, ಪ್ರೋತ್ಸಾಹಧನ (Incentives) ಹಾಗೂ ಶಾಸನಬದ್ಧ ಸೌಲಭ್ಯ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಎಲ್ಲೆಲ್ಲಿ ನಡೆಯಲಿದೆ ನೇರ ಸಂದರ್ಶನ?

ಸಂದರ್ಶನವು ಎರಡು ದಿನಗಳ ಕಾಲ ವಿವಿಧ ಸ್ಥಳಗಳಲ್ಲಿ ನಡೆಯಲಿದೆ:

ಸಂದರ್ಶನ 1

14 ಮಾರ್ಚ್ 2026, ಬೆಳಗ್ಗೆ 10:30ಕ್ಕೆ, ಸ್ಥಳ: ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಶೋರೂಮ್, ತೀರ್ಥಹಳ್ಳಿ, ಶಿವಮೊಗ್ಗ.

ಸಂದರ್ಶನ 2

15 ಮಾರ್ಚ್ 2026, ಬೆಳಗ್ಗೆ 10:30ಕ್ಕೆ, ಸ್ಥಳ: ರಾಯಲ್ ಆರ್ಕಿಡ್ ಹೋಟೆಲ್, ಶಿವಮೊಗ್ಗ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ nationalgoldpalace@gmail.com ಅಥವಾ ಮೊಬೈಲ್‌ ಸಂಖ್ಯೆ 8762859226 ಗೆ ಕರೆ ಮಾಡಬಹುದು.

ಇದನ್ನೂ ಓದಿ – ಗೋಪಿ ಸರ್ಕಲ್‌ನಲ್ಲಿ ಡೊನಾಲ್ಡ್‌ ಟ್ರಂಪ್‌ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್‌, ಸೌದೆ ಒಲೆ ಅಡುಗೆ

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 12, 2026

Leave a Comment