‘ನಾವು ಶಿವಮೊಗ್ಗ ಜಿಲ್ಲೆಯವರು’ ಎಂದು ಹೆಮ್ಮೆಯಿಂದ ಹೇಳಬಹುದು, ಅದಕ್ಕಾಗಿ ಆರಂಭವಾಗ್ತಿದೆ ಪ್ರಯೋಗ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | 1 ಏಪ್ರಿಲ್ 2022

ಶಿವಮೊಗ್ಗ ಲೈವ್.ಕಾಂ 15 ಲಕ್ಷ ವಿವ್ಸ್ ಪಡೆದಿದೆ. ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಸಂಖ್ಯೆಯ ಓದುಗರನ್ನು ತಲುಪುತ್ತಿರುವ ಮಾಧ್ಯಮವಾಗಿ ಬೆಳೆದು ನಿಂತಿದೆ. ಸುದ್ದಿ ಅಷ್ಟೆ ಒದಗಿಸುತ್ತಿದ್ದ ಶಿವಮೊಗ್ಗ ಲೈವ್ ಇನ್ಮುಂದೆ ಹೊಸ ಬಗೆಯ ಮಾಹಿತಿಗಳನ್ನು ನಿಮ್ಮ ಮುಂದಿಡಲು ಅಣಿಯಾಗುತ್ತಿದೆ.

ಭಾಷಣಗಳು, ಹೇಳಿಕೆಗಳು, ಘಟನೆಗಳ ಹೊರತಾಗಿ ವಿಭಿನ್ನವಾಗಿ ಶಿವಮೊಗ್ಗ ಮತ್ತು ಶಿವಮೊಗ್ಗದ ಜನರನ್ನು ಪರಿಚಯಿಸುವ ಕಾಲಂಗಳು ಸಿದ್ಧವಾಗುತ್ತಿವೆ.

ಏನೆಲ್ಲ ಹೊಸತನವಿರಲಿದೆ

ದಿನಕ್ಕೊಂದು ಹೊಸ ವಿಚಾರ ತಿಳಿಸುವ ಉದ್ದೇಶದಿಂದ ಕೆಲವು ಕಾಲಂಗಳನ್ನು ಪ್ರಾರಂಭಿಸುತ್ತಿದ್ದೇವೆ.

  1. ನೋಡಿ ಸ್ವಾಮಿ ನಾವಿರೋದು ಹೀಗೆ..!
  2. ನಮ್ಮೂರು ಶಿವಮೊಗ್ಗ
  3. ನಂಬರ್’ಗಳಲ್ಲಿ ನಮ್ಮೂರು
  4. ದೇಗುಲ ದರ್ಶನ
  5. ನಮ್ಮೂರ ಸ್ಟಾರ್ಸ್
  6. ಜೊತೆಗಿದ್ದವರು

ಯುಗಾದಿ ದಿನ ಲೋಗೋ ಅನಾವರಣ

ಯುಗಾದಿ ಹಬ್ಬದ ದಿನ ಶಿವಮೊಗ್ಗ ಲೈವ್.ಕಾಂನ ಹೊಸ ಕಾಲಂಗಳ ಲೋಗೊಗಳನ್ನು ಅನಾವರಣ ಮಾಡಲಾಗುತ್ತದೆ. ಈ ಕಾಲಂಗಳು ಶಿವಮೊಗ್ಗದ ಬಗ್ಗೆ, ಶಿವಮೊಗ್ಗದ ಜನರ ಬಗ್ಗೆ ನಾವು ತಿಳಿದುಕೊಳ್ಳಬೇಕಿರುವ, ಹೆಮ್ಮೆ ಪಡಬೇಕಿರುವ ಸಂಗತಿಗಳನ್ನು ತಿಳಿಸಲಿವೆ.

ಇದಿಷ್ಟೇ ಅಲ್ಲ..!

ಈ ಆರು ಕಾಲಂಗಳು ಆರಂಭಿಕ ಪ್ರಯತ್ನವಷ್ಟೆ. ಇದರ ಹಿಂದೆಯೇ ಮತ್ತಷ್ಟು ವಿಭಿನ್ನವಾದ ಕಾಲಂಗಳು ಶಿವಮೊಗ್ಗ ಲೈವ್.ಕಾಂನಲ್ಲಿ ಪ್ರಕಟವಾಗಲಿದೆ. ನಮ್ಮೂರ ಪ್ರತಿಯೊಬ್ಬರಿಗೆ ಪೂರ್ಣ ಮಾಹಿತಿ ಒದಗಿಸುವ, ನಾವು ಶಿವಮೊಗ್ಗದವರು ಎಂದು ಹೆಮ್ಮೆಯಿಂದ ಬೀಗುವಂತೆ ಮಾಡುವುದೆ ಈ ಕಾಲಂಗಳ ಉದ್ದೇಶವಾಗಿದೆ.

ನಿಮ್ಮ ಸಹಕಾರ ಅತಿ ಮುಖ್ಯ. ಆ ಸಹಕಾರದ ನಿರೀಕ್ಷೆಯೊಂದಿಗೆ ಶಿವಮೊಗ್ಗ ಲೈವ್.ಕಾಂ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿದೆ.

ಧನ್ಯವಾದಗಳು

Nanjappa Hospital Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment