ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | BIKE THEFT | 06 ಮೇ 2022
ಶಿವಮೊಗ್ಗದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಕೆಲವೆ ನಿಮಿಷದಲ್ಲಿ ಬೈಕ್ ಕಳ್ಳತನ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹೊಟೇಲ್ ಒಂದರಲ್ಲಿ ಟೀ ಕುಡಿದು ಹಿಂತಿರುಗುವಷ್ಟರಲ್ಲಿ ಬೈಕ್ ಕಳ್ಳತನ ಮಾಡಲಾಗಿದೆ.
ಕಾಶಿಪುರದ ಮಂಜುನಾಥ್ ಅವರಿಗೆ ಸೇರಿದ ಟಿವಿಎಸ್ ಜುಪಿಟರ್ ಬೈಕ್ ಕಳ್ಳತನ ಮಾಡಲಾಗಿದೆ. ಪಾರ್ಕ್ ಬಡಾವಣೆಯ ಹೊಟೇಲ್ ಒಂದರ ಮುಂದೆ ಮಂಜುನಾಥ್ ಅವರು ಬೈಕ್ ನಿಲ್ಲಿಸಿದ್ದರು.
ಟೀ ಕುಡಿದು ಹೊರೆಗೆ ಬರುವಷ್ಟರಲ್ಲಿ ಟಿವಿಎಸ್ ಜುಪಿಟರ್ ಬೈಕ್ ನಾಪತ್ತೆಯಾಗಿದೆ. ಬೈಕ್ ಮೌಲ್ಯ 75 ಸಾವಿರ ಎಂದು ಅಂದಾಜಿಸಲಾಗಿದೆ. ಬೈಕ್ ಕಳ್ಳತನವಾಗಿರುವ ಕುರಿತು ಮಂಜುನಾಥ್ ಅವರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲಕನ ಕಿವಿಗೆ ಹೊಡೆದು, ಕೈ ತಿರುಗಿಸಿ ಹಲ್ಲೆ
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






