ಶಿವಮೊಗ್ಗದಲ್ಲಿ ಪಿಗ್ಮಿ ಕಟ್ಟಿಸಿಕೊಂಡು ಹಣ ಹಿಂತಿರುಗಿಸದೆ ಫೈನಾನ್ಸ್ ಸಂಸ್ಥೆಗೆ ಬೀಗ

SHIVAMOGGA LIVE NEWS | SHIMOGA | 11 ಜೂನ್ 2022 LOAN (ಈ ಸುದ್ದಿಯನ್ನು ಇನ್ನು 79 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪಿಗ್ಮಿ ಕಟ್ಟಿಸಿಕೊಂಡು ಹಣವನ್ನು ಹಿಂತಿರುಗಿಸದೆ ಫೈನಾನ್ಸ್ ಸಂಸ್ಥೆಗೆ ಬೀಗ ಹಾಕಲಾಗಿದೆ. ಈ ಸಂಬಂಧ ಗ್ರಾಹಕರೊಬ್ಬರು ಪೊಲೀಸ್ ಠಾಣೆ ಮಟ್ಟಿಲು ಹತ್ತಿದ್ದಾರೆ.

Shimoga Nanjappa Hospital

ಸಿಂಧೂದರ ಎಂಬ ಉದ್ಯಮಿಯೊಬ್ಬರು ಶಿವಮೊಗ್ಗದ ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಪಿಗ್ಮಿ ಕಟ್ಟುತ್ತಿದ್ದರು. ಪ್ರತಿ ದಿನ 500 ರೂ. ಪಿಗ್ಮಿ ಹಣವನ್ನು ಪಾವತಿ ಮಾಡಿದ್ದರು.

ಖಾತೆಯಲ್ಲಿ 1.03 ಲಕ್ಷ ರೂ. ಹಣ ಸಂಗ್ರಹವಾಗಿತ್ತು. ತುರ್ತಾಗಿ ಹಣದ ಅವಶ್ಯಕತೆ ಇದ್ದಿದ್ದರಿಂದ, ಸಿಂಧೂದರ ಅವರು ಫೈನಾನ್ಸ್ ಸಂಸ್ಥೆಗೆ ಹೋಗಿ ಹಣ ಕೇಳಿದ್ದಾರೆ. ಆಗ 60,770 ರೂ.ಗೆ ಚಿಕ್ ನೀಡಿದ ಸಂಸ್ಥೆಯ ಪ್ರಮುಖರು, ಉಳಿದ ಹಣವನ್ನು ಕೆಲವೆ ದಿನದಲ್ಲಿ ನಗದಾಗಿ ಕೊಡುವುದಾಗಿ ತಿಳಿಸಿದರು.

ಆದರೆ ಬ್ಯಾಂಕಿನಲ್ಲಿ ಚೆಕ್ ಬೌನ್ಸ್ ಆಗಿದೆ. ಹಲವು ಭಾರಿ ಹಣ ಕೇಳಿದರೂ ಕೊಟ್ಟಿಲ್ಲ. ಕೊನೆಗೆ ಫೈನಾನ್ಸ್ ಸಂಸ್ಥೆಗೆ ಬೀಗ ಹಾಕಲಾಗಿದೆ. ಹಾಗಾಗಿ ಸಿಂಧೂದರ ಅವರು ನಾಗರಾಜ ಮತ್ತು ಸಂತೋಷ್ ಎಂಬುವವರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – ಶಿವಮೊಗ್ಗ ತಾಲೂಕು ಕಚೇರಿ ಪಾರ್ಕಿಂಗ್’ನಲ್ಲಿ ನಿಲ್ಲಿಸಿದ್ದ ಬೈಕ್ ಇಲ್ಲ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

crime name image

Leave a Comment