ಹೊಟ್ಟೆ ತುಂಬಾ ತಿಂದು, ಬಿಲ್ ಕೇಳಿದ್ದಕ್ಕೆ ಹೊಟೇಲ್ ಮಾಲೀಕನಿಗೆ ಒಡೆದ ಬಾಟಲಿಯಲ್ಲಿ ಚುಚ್ಚಿದರು

SHIVAMOGGA LIVE NEWS | SHIMOGA | 15 ಜೂನ್ 2022

ಹೊಟೇಲ್’ನಲ್ಲಿ ಊಟ ಮಾಡಿ, ಬಿಲ್ ಪಾವತಿಸುವಂತೆ ತಿಳಿಸಿದ ಮಾಲೀಕನಿಗೆ ಒಡೆದ ಬಾಟಲಿಯಲ್ಲಿ ಚುಚ್ಚಲು ಯತ್ನಿಸಿ, ಕೊಲೆ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ASSAULT

Shimoga Nanjappa Hospital

ಶಿವಮೊಗ್ಗದ ಸಕ್ರೆಬೈಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸಕ್ರೆಬೈಲು ಹೊಟೇಲ್’ನ ಕೆ.ಎಂ.ರವಿ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ.

ಏನಿದು ಪ್ರಕರಣ? ದಾಳಿಗೇನು ಕಾರಣ?

ಸಕ್ರೆಬೈಲು ಹೊಟೇಲ್’ಗೆ ಬಂದಿದ್ದ ನಾಲ್ವರು ಯುವಕರು ಮಧ್ಯಾಹ್ನದಿಂದ ಸಂಜೆವರೆಗೆ ಇದ್ದರು. ಊಟ ಮಾಡಿದ್ದ ಅವರು ಸಂಜೆ ಬಿಯರ್ ಬೇಕು ಎಂದು ಕೇಳಿದ್ದಾರೆ. ಸಪ್ಲೈಯರ್ ಬಿಯರ್ ಸಿಗುವುದಿಲ್ಲ ಎಂದು ತಿಳಿಸಿದ್ದಾನೆ. ಕೆ.ಎಂ.ರವಿ ಅವರು ಅಲ್ಲಿಗೆ ಬಂದು ಬಿಯರ್ ಇಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಊಟದ ಬಿಲ್ ಪಾವತಿ ಮಾಡುವಂತೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಇಬ್ಬರು ಯುವಕರು ಅವಾಚ್ಯವಾಗಿ ನಿಂದಿಸಿದ್ದಾರೆ. ಕೂಲ್ ಡ್ರಿಂಕ್ ಬಾಟಲಿ ಒಡೆದು ರವಿ ಅವರಿಗೆ ಚುಚ್ಚಲು ಮುಂದಾಗಿದ್ದಾರೆ. ತಪ್ಪಿಸಿಕೊಳ್ಳಲು ಕೈ ಅಡ್ಡ ಹಿಡಿದ್ದರಿಂದ ಎಡಗೈ ಮುಂಗೈಗೆ ಗಾಯವಾಗಿ ರಕ್ತ ಸುರಿಯಲು ಆರಂಭಿಸಿದೆ. ಇದೆ ವೇಳೆ, ಕೊಲೆ ಬೆದರಿಕೆಯನ್ನು ಒಡ್ಡಿದ್ದಾರೆ.

ಇದೆ ವೇಳೆ ಮತ್ತಿಬ್ಬರು ಯುವಕರು ಬಿಲ್ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಆಕ್ರೋಶಗೊಂಡಿದ್ದ ಇಬ್ಬರನ್ನು ಸಮಾಧನಪಡಿಸಿ ಕಳುಹಿಸಿದ್ದಾರೆ. ಬಳಿಕ ಉಳಿದ ಇಬ್ಬರು ಯುವಕರು ಬಿಲ್ ಪಾವತಿ ಮಾಡಿದ್ದಾರೆ.

ದಾಳಿ ಸಂಬಂಧ ರವಿ ಅವರು ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ – ಹುಷಾರ್, ನಿಮ್ಮ ಮನೆಗೂ ಬರಬಹುದು ‘ಮೆಸ್ಕಾಂ ಬಿಲ್ ಕಲೆಕ್ಟರ್’, ಭದ್ರಾವತಿಯಲ್ಲೊಂದು ವಿಚಿತ್ರ ಕೇಸ್

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

Tunga-Nagara-Police-Station-Shimoga

Leave a Comment