ಮನೆ ಗೋಡೆ ಕುಸಿದು ಅವಶೇಷಗಳಡಿ ಸಿಲುಕಿದ ತಾಯಿ, ಮಗಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 16 ಜುಲೈ 2022

ರಾಗಿಗುಡ್ಡ ಬಡಾವಣೆಯಲ್ಲಿ (RAGIGUDDA LAYOUT) ಮನೆಯೊಂದರ ಗೋಡೆ ಕುಸಿದು ತಾಯಿ ಹಾಗೂ ಮಗಳು ಗಾಯಗೊಂಡಿದ್ದಾರೆ. ಭವಾನಿ ರಾವ್ ಎಂಬುವವರ ಪತ್ನಿ ಉಮಾ ಹಾಗೂ ಪುತ್ರಿ ಕಾವ್ಯಾ ತೀವ್ರವಾಗಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ (Mc GANN HOSPITAL) ದಾಖಲು ಮಾಡಲಾಗಿದೆ.

Shimoga Nanjappa Hospital

ಭಾರೀ ಮಳೆಯಿಂದಾಗಿ (HEAVY RAIN) ತೇವಗೊಂಡಿದ್ದ ಮನೆ ಗೋಡೆ ಬೆಳಗಿನ ಜಾವ 3 ಗಂಟೆ ವೇಳೆಗೆ ಕುಸಿದು ಅವಘಡ ಸಂಭವಿಸಿದೆ. ಮನೆಯ ಹಾಲ್ ನಲ್ಲಿ ಮಲಗಿದ್ದ ಕುಟುಂಬದ ಸದಸ್ಯರು ಬಿದ್ದ ಗೋಡೆಯ ಅವಶೇಷಗಳಡಿ (WALL COLLAPSE) ಸಿಲುಕಿದ್ದಾರೆ. ತಕ್ಷಣವೇ ಸ್ಥಳೀಯ ನಿವಾಸಿಗಳು ಹರಸಾಹಸ ನಡೆಸಿ ಕುಟುಂಬದವರನ್ನು ರಕ್ಷಿಸಿದ್ದಾರೆ.

https://chat.whatsapp.com/Doh0PyFFSiTBZY73X533cb

ಘಟನೆಯಲ್ಲಿ ಮನೆಯ ಮಾಲೀಕ ಯತಿರಾಜ್ ಅವರಿಗೂ ಗಾಯವಾಗಿದೆ. ಉಮಾ ಅವರಿಗೆ ಕೈಕಾಲು ಹಾಗೂ ಸೊಂಟಕ್ಕೆ ಪೆಟ್ಟಾಗಿದೆ. ಕಾವ್ಯಾಗೆ ಭುಜದ ಮೂಳೆ ಮುರಿದಿದೆ.

ಮೆಗ್ಗಾನ್ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಉಪಮೇಯರ್ ಶಂಕರ್ ಗನ್ನಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಇದನ್ನೂ ಓದಿ – ಇವತ್ತು ತುಂಗಾ ಜಲಾಶಯದ ಒಳ, ಹೊರ ಹರಿವು ಎಷ್ಟಿದೆ?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment