ಶಿವಮೊಗ್ಗ ಲೈವ್.ಕಾಂ | 02 ಏಪ್ರಿಲ್ 2019
ಸಚಿವ ಡಿ.ಕೆ.ಶಿವಕುಮಾರ್ ಅವರ ಭದ್ರಾವತಿಯ ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಚುನಾವಣಾ ಆಯೋಗ ದೂರು ದಾಖಲಿಸಿದೆ.

ಭದ್ರಾವತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಸಭೆಗೆ ಬಂದಿದ್ದ ಕಾರ್ಯಕರ್ತರಿಗೆ ಉಪ್ಪಿಟ್ಟು, ಕೇಸರಿ ಬಾತ್ ಹಂಚಲಾಯಿತು. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ARO ದೂರು ದಾಖಲಿಸಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚುನಾವಣಾ ಪ್ರಚಾರ ಸಭೆಗೆ ಆಗಮಿಸುವ ಕಾರ್ಯಕರ್ತರಿಗೆ ನೀರು, ಮಜ್ಜಿಗೆ ಹಂಚಬಹುದು. ಒಂದು ವೇಳೆ ಉಪಹಾರ ನೀಡುವುದಿದ್ದರೆ, ಆಯೋಗದಿಂದ ಅನುಮತಿ ಕಡ್ಡಾಯ. ಆದರೆ ಕಾಂಗ್ರೆಸ್ ಸಭೆಯಲ್ಲಿ ಅನುಮತಿ ಇಲ್ಲದೆ ಉಪಹಾರ ನೀಡಿದ್ದರಿಂದ, ದೂರು ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com

LATEST NEWS
- ಬೈಕ್ಗೆ ಡಿಕ್ಕಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಖಾಸಗಿ ಬಸ್

- ತಾಳಗುಪ್ಪ ಇಂಟರ್ಸಿಟಿ ರೈಲು, ಬೆಂಗಳೂರು ಮಹಿಳೆಯ ದೂರು, ದಾವಣಗೆರೆಯ ವ್ಯಕ್ತಿ ಅರೆಸ್ಟ್, ಆಗಿದ್ದೇನು?

- ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

- ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

- ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್ ಇರಲ್ಲ

About The Editor
ನಿತಿನ್ ಆರ್.ಕೈದೊಟ್ಲು











