ಮಳೆ ಬಂದರೆ ಶಿವಮೊಗ್ಗದ ಪ್ರತಿಷ್ಠಿತ ಬಡಾವಣೆ ನಿವಾಸಿಗಳಿಗೆ ನಿದ್ರೆ ಹಾರಿ ಹೋಗುತ್ತೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS

ಶಿವಮೊಗ್ಗ| ಮಳೆಗಾಲ ಶುರುವಾಗುತ್ತಿದ್ದಂತೆ ಗೋಪಾಲಗೌಡ ಬಡಾವಣೆ (GOPALA GOWDA LAYOUT) ನಿವಾಸಿಗಳು ನಿದ್ರೆಯೆ ಹಾರಿ ಹೋಗುತ್ತದೆ. ಪ್ರತಿ ಮಳೆಗೂ (RAIN) ಜನರು ಆತಂಕ ಪಡುವಂತಾಗಿದೆ.

Shimoga Nanjappa Hospital

ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್ ನಿವಾಸಿಗಳಿಗೆ ಮಳೆಗಾಲ ಆರಂಭವಾಗುತ್ತಿದ್ದಂತೆ ನಡುಕ ಹುಟ್ಟುತ್ತದೆ. ಮಳೆ (RAIN) ಪ್ರಮಾಣ ಸ್ವಲ್ಪ ಹೆಚ್ಚಾದರೂ, ಮನೆಗಳು ಜಲಾವೃತವಾಗಲಿವೆ. ಸಮಸ್ಯೆ ಪರಿಹರಿಸಿಕೊಡಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದುಂಬಾಲು ಬಿದ್ದರೂ ಪರಿಹಾರ ಸಿಕ್ಕಿಲ್ಲ.

ಕೆಳಗಿನ ಮನೆಯವರಿಗೆ ಸಂಕಷ್ಟ

ಸಿ ಬ್ಲಾಕ್’ನಲ್ಲಿರುವ ನೆಲ ಅಂತಸ್ತಿನ ಮನೆಗಳ ನಿವಾಸಿಗಳಿಗೆ ಮಳೆಗಾಲ ದೊಡ್ಡ ಸಂಕಷ್ಟ ತಂದೊಡ್ಡುತ್ತದೆ. ಮಳೆ ಸುರಿಯುತ್ತಿದ್ದಂತೆ ಮನೆಗಳಿಗೆ ನೀರು ಬರಲು ಆರಂಭವಾಗುತ್ತದೆ. ಮನೆಗಳಲ್ಲಿ 3 ರಿಂದ 4 ಅಡಿಯಷ್ಟು ನೀರು ನಿಲ್ಲಲ್ಲಿದೆ. ಕೊಳಚೆ ನೀರನ್ನು ಹೊರಗೆ ಹಾಕಲು ಹರಸಾಹಸ ಪಡಬೇಕು. ಏಕಾಏಕಿ ನೀರು ನುಗ್ಗುವುದರಿಂದ ಮನೆಯಲ್ಲಿರುವ ವಸ್ತುಗಳು ಹಾನಿಯಾಗುತ್ತಿವೆ.

ರಾಜ ಕಾಲುವೆಯೇ ಕಾರಣ

Shimoga Gopala Gowda layoutಮನೆಗಳಿಗೆ ನೀರು ನುಗ್ಗಲು ರಾಜ ಕಾಲುವೆಯೆ ಕಾರಣ ಎಂದು ನಿವಾಸಿಗಳು ಆರೋಪಿಸುತ್ತಾರೆ. ಬಡಾವಣೆಯ ಪಕ್ಕದಲ್ಲಿರಾಜ ಕಾಲುವೆ ಹಾದು ಹೋಗಿದೆ. ಗಾಡಿಕೊಪ್ಪ, ಸ್ವಾಮಿ ವಿವೇಕಾನಂದ ಬಡಾವಣೆಯ ಕೊಳಚೆ ನೀರು ಈ ರಾಜ ಕಾಲುವೆ ಮೂಲಕ ಹರಿದು ಹೋಗಲಿದೆ. ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್’ನಲ್ಲಿರುವ ಮನೆಗಳಿಗಿಂತಲೂ ರಾಜಕಾಲುವೆಯೆ ಎತ್ತರದಲ್ಲಿದೆ. ಹಾಗಾಗಿ ಮಳೆ ಜೋರಾದರೆ ರಾಜ ಕಾಲುವೆ ಭರ್ತಿಯಾಗಿ, ಮನೆಗಳಿಗೆ ನೀರು ನುಗ್ಗಲಿದೆ.

ಮನವಿ ಮಾಡಿ ಹೈರಾಣಾದರು

ಸಿ ಬ್ಲಾಕ್’ನಲ್ಲಿ ಮೂಲ ಸೌಕರ್ಯವಿಲ್ಲ. ರಾಜ ಕಾಲುವೆಯಿಂದ ಜನರ ನೆಮ್ಮದಿಯೇ ಹಾಳಾಗಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವು ಭಾರಿ ಮನವಿ ಮಾಡಲಾಗಿದೆ. ಆದರೆ ಈತನಕ ಯಾವುದೆ ಪ್ರಯೋಜನವಾಗಿಲ್ಲ. ಇಲ್ಲಿ ಸರಿಯಾದ ರಸ್ತೆ ಇಲ್ಲ, ಯುಜಿಡಿ ವ್ಯವಸ್ಥೆ ಇಲ್ಲ, ರಾಜ ಕಾಲುವೆಯ ತಡೆಗೋಡೆಯನ್ನು ಎತ್ತರ ಮಾಡಬೇಕು ಎಂದು ಹಲವು ಭಾರಿ ಮನವಿಗೂ ಬೆಲೆ ಸಿಕ್ಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರೋಡು ಕೆಸರು ಗುಂಡಿಯಾಗಿದೆ. ನಾಟಿ ಮಾಡಬಹುದಾಗಿದೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಯಾವಾಗ ಮಳೆ ಬಂದರೂ ಇದೆ ಸಮಸ್ಯೆ. 15 ವರ್ಷದಿಂದ ಇಲ್ಲಿ ವಾಸಿಸುತ್ತಿದ್ದೇವೆ. ಇತ್ತೀಚಿನ ವರ್ಷದಲ್ಲಿ ಈ ಸಮಸ್ಯೆ ಶುರುವಾಗಿದೆ.ಗೋಪಾಲಗೌಡ ಬಡಾವಣೆ ಸಿ ಬ್ಲಾಕ್ ನಿವಾಸಿಗಳು

Shimoga Gopala gowda layout

ಕಾರ್ಪೊರೇಟರ್ ಮುಂದೆ ಆಕ್ರೋಶ

ಸ್ಥಳೀಯ ಕಾರ್ಪೊರೇಟರ್ ಎಸ್.ಜ್ಞಾನೇಶ್ವರ್ ಅವರು ಬಡಾವಣೆಗೆ ಭೇಟಿ ನೀಡಿ, ಸ್ಥಳೀಯರ ಜೊತೆ ಸಮಸ್ಯೆ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ತಮ್ಮ ಸಮಸ್ಯೆ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾಲುವೆ ನೀರು ಮನೆಗಳಿಗೆ ನುಗ್ಗುತ್ತಿದೆ. ಈ ಕುರಿತು ಪರಿಶೀಲನೆ ನಡೆಸಲಾಗಿದೆ. ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಲು ಪ್ರಯತ್ನ ಮಾಡಲಾಗುತ್ತದೆ.ಎಸ್.ಜ್ಞಾನೇಶ್ವರ್, ಕಾರ್ಪೊರೇಟರ್

Shimoga Gopalagowda layout

ಸಮಸ್ಯೆಯಿಂದ ಮುಕ್ತಿ ಕೊಡಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಇಲ್ಲವಾದಲ್ಲಿ ಮನೆ ಖಾಲಿ ಮಾಡುವ ಪರಿಸ್ಥಿತಿ ಉಂಟಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ – ಮನೆ ಮನೆಗೂ ತಿರಂಗ, ಸಾಗರದಲ್ಲಿ ರೆಡಿಯಾಗ್ತಿದೆ 50 ಸಾವಿರ ರಾಷ್ಟ್ರಧ್ವಜ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 1, 2022

Leave a Comment