ಬಾಟಲಿಯಿಂದ ಹೊಡೆದು, ಕಲ್ಲು ಎತ್ತಿ ಹಾಕಿ ಕೊಲೆ, ಕಾರಣ ಬಾಯಿಬಿಟ್ಟ ಆರೋಪಿಗಳು

SHIVAMOGGA LIVE NEWS

ಶಿವಮೊಗ್ಗ | ಗಾಡಿಕೊಪ್ಪದಲ್ಲಿ ನಡೆದ ಯುವಕನ ಕೊಲೆಗೆ (MURDER) ಕಾರಣ ಬಯಲಾಗಿದೆ. ಮದ್ಯದ ಬಾಟಲಿಯಿಂದ ಹೊಡೆದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಹತ್ಯೆ ಮಾಡಲಾಗಿತ್ತು.

Shimoga Nanjappa Hospital

ಹೊಸಮನೆ ಬಡಾವಣೆಯ ಕಿರಣ್ ಅಲಿಯಾಸ್ ಪುಚ್ಚಿ (23) ಎಂಬಾತನ ಹತ್ಯೆ ಮಾಡಲಾಗಿದೆ. ಕಿರಣನ ಸ್ನೇಹಿತರಾದ ಪ್ರಜ್ವಲ್ ಮತ್ತು ಕಾರ್ತಿಕ್ ಹತ್ಯೆ ಮಾಡಿದ್ದರು.

ಹತ್ಯೆಗೆ ಕಾರಣ ಬಾಯಿಬಿಟ್ಟರು

ಕಿರಣ ಹತ್ಯೆ ಪ್ರಕರಣ ಸಂಬಂಧ ಪ್ರಜ್ವಲ್ ಮತ್ತು ಕಾರ್ತಿಕ್’ನನ್ನು ಬಂಧಿಸಲಾಗಿದೆ. ವಿನೋಬನಗರ ಪೊಲೀಸರು ವಿಚಾರಣೆ ನಡೆಸಿದ್ದು, ಆರೋಪಿಗಳು ಕೊಲೆಗೆ ಕಾರಣ ಬಾಯಿಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ –  ಭದ್ರಾವತಿಯಲ್ಲಿ ನಾಡ ಬಂದೂಕಿನಿಂದ ತಮ್ಮನ ಮೇಲೆ ಗುಂಡು ಹಾರಿಸಿದ ಅಣ್ಣ

ಪ್ರಜ್ವಲ್ ಮತ್ತು ಹತ್ಯೆಯಾದ ಕಿರಣ್ ಇಬ್ಬರು ಹೊಸಮನೆ ಬಡಾವಣೆಯವರು. ಪ್ರಜ್ವಲ್ ಪಾರೀಕ್ಷೆಯಲ್ಲಿ ಪಾಸ್ ಆಗಿದ್ದ. ಅದಕ್ಕಾಗಿ ಪಾರ್ಟಿ ಕೊಡಿಸುವಂತೆ ಕಿರಣ್ ಕೇಳುತ್ತಿದ್ದ. ಹಾಗಾಗಿ ಮಂಗಳವಾರ ರಾತ್ರಿ ಕಿರಣ, ಪ್ರಜ್ವಲ್ ಮತ್ತು ಕಾರ್ತಿಕ್ ಮೂವರು ಗಾಡಿಕೊಪ್ಪದ ಗಂಧರ್ವ ಬಾರ್ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವನೆ ಮಾಡಿದ್ದರು.

ಹಣಕ್ಕಾಗಿ ಪೀಡಿಸಿ ಹಲ್ಲೆ

ಪಾರ್ಟಿ ಸಂದರ್ಭ ಹಣ ಕೊಡುವಂತೆ ಕಿರಣ ಪೀಡಿಸಿದ್ದ. ಎರಡು ಸಾವಿರ ರೂ. ಹಣ ನೀಡುವಂತೆ ಪ್ರಜ್ವಲ್ ಮತ್ತು ಕಾರ್ತಿಕ್ ಜೊತೆಗೆ ಜಗಳವಾಡಿದ್ದ. ಈ ವೇಳೆ ಪ್ರಜ್ವಲ್ ಮತ್ತು ಕಾರ್ತಿಕ್ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಹಾಗಾಗಿ ಕಿರಣನಿಗೆ ಮದ್ಯ ಕುಡಿಸಿ, ಅದೆ ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ. ಬಳಿಕ ಕಲ್ಲು ಎತ್ತಿ ಹಾಕಿ ಹತ್ಯೆ (MURDER) ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರಿಗೆ ಶರಣಾದ ಆರೋಪಿಗಳು

ಹತ್ಯೆ ಬಳಿಕ ಅರೋಪಿಗಳು ತಾವೇ ಬಂದು ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಬಳಿಕ ಸ್ಥಳ ಪರಿಶೀಲನೆ ನಡೆಸಿದ ವಿನೋಬನಗರ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ಗಾಡಿಕೊಪ್ಪದಲ್ಲಿ ಯುವಕನ ಕೊಲೆ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

Hosamane-Kiran-Murder-Case

Leave a Comment