ಕೆಲಸ ಹುಡುಕ್ತಿದ್ದೀರಾ? ಹುಷಾರು, ಯಾಮಾರಿಸುವ ಜಾಲವಿದೆ, ಮಹಿಳೆಗೆ 4 ಲಕ್ಷ ರೂ. ಪಂಗನಾಮ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಪಾರ್ಟ್ ಟೈಮ್ (PART TIME JOB) ಕೆಲಸದ ಆಮಿಷವೊಡ್ಡಿ, ಇನ್ಫೋಸಿಸ್ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಮಾಡಲಾಗಿದೆ. ಉದ್ಯೋಗ ಅರಸುವವರನ್ನೆ ಗುರಿಯಾಗಿಸಿಕೊಂಡು ವಂಚಕರು ಜಾಲ ಬೀಸಿದ್ದಾರೆ.

Sarji Hospital

ಗೃಹಿಣಿಯೊಬ್ಬರು ಫೇಸ್ ಬುಕ್’ನಲ್ಲಿ (FACEBOOK) ಇನ್ಫೋಸಿಸ್ (INFOSYS) ಸಂಸ್ಥೆಯ ಹೆಸರಿನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದಾರೆ. ಬಳಿಕ ವಂಚಕರು  (ONLINE FRAUD) ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ, 4 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಏನಿದು ಪ್ರಕರಣ? ಹೇಗಾಯ್ತು ವಂಚನೆ?

ಫೇಸ್ ಬುಕ್ಕಲ್ಲಿ ಇನ್ಫೋಸಿಸ್ ಸಂಸ್ಥೆಯ ಹೆಸರಿನಲ್ಲಿದ್ದ ಲಿಂಕನ್ನು ಗೃಹಿಣಿ ಕ್ಲಿಕ್ ಮಾಡಿದ್ದಾರೆ. ಮತ್ತೊಂದು ಪೇಜ್ ತೆರೆದುಕೊಂಡಿದ್ದು, ಹೆಸರು, ಮೊಬೈಲ್ ನಂಬರ್, ವಿಳಾಸ ಪಡೆದುಕೊಂಡಿದ್ದಾರೆ. ಕೆಲವೆ ನಿಮಿಷದಲ್ಲಿ ಗೃಹಿಣಿಯ ಟೆಲಿಗ್ರಾಂಗೆ ಒಂದು ಲಿಂಕ್ ಬಂದಿದೆ. ಅದನ್ನು ಕ್ಲಿಕ್ ಮಾಡಿದಾಗ ಟಾಸ್ಕ್ ನೀಡಿದ್ದಾರೆ.

ಟಾಸ್ಕ್ ಪೂರ್ಣಗೊಳ್ಳುತ್ತಿದ್ದ ಹಾಗೆ ಗೃಹಿಣಿ ಖಾತೆಗೆ 350 ರೂ. ಜಮೆ ಆಗಿರುತ್ತದೆ ಎಂದು ತೋರಿಸಲಾಗಿದೆ. ಈ ಹಣವನ್ನು ಪಡೆದುಕೊಳ್ಳಲು 400 ರೂ. ಕಟ್ಟಬೇಕು ಎಂದು ಪೇಟಿಯಂ ಲಿಂಕ್ ಕಳುಹಿಸಿದ್ದಾರೆ. ಅಲ್ಲದೆ ಇನ್ನಷ್ಟು ಟಾಸ್ಕ್ ಬರಲಿದೆ. ಹೆಚ್ಚು ಹಣವನ್ನು ಸಂಪಾದಿಸಬಹುದು ಎಂದು ಆಮಿಷ ಒಡ್ಡಲಾಗಿದೆ. ಇದನ್ನು ನಂಬಿದ ಗೃಹಿಣಿ 400 ರೂ. ಹಣವನ್ನು ಪೇಟಿಯಂ ಮೂಲಕ ಕಳುಹಿಸಿದ್ದಾರೆ.

TODAY-NEWS-FOR-WEBSITE

ಹತ್ತು ದಿನದಲ್ಲಿ ಗೃಹಿಣಿಗೆ ಹಲವು ಟಾಸ್ಕ್ ನೀಡಿ, ಆದಾಯ ಹೆಚ್ಚಾಗಿದೆ ಎಂದು ಬಿಂಬಿಸಲಾಗಿದೆ. ಗೃಹಿಣಿಯಿಂದ ಹಂತ ಹಂತವಾಗಿ 4.03 ಲಕ್ಷ ರೂ. ಹಣವನ್ನು ವಂಚಕರು ಪಡೆದುಕೊಂಡಿದ್ದಾರೆ. ಸ್ವಲ್ಪ ದಿನದ ಬಳಿಕ ತಾವು ಸಂಪಾದಿಸಿದ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಗೃಹಿಣಿ ಒತ್ತಾಯಿಸಿದಾಗ ವಂಚಕರ ಬಣ್ಣ ಬಯಲಾಗಿದೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಉದ್ಯೋಗ ಅರಸುತ್ತಿರುವವರೆ ಟಾರ್ಗೆಟ್

ಉದ್ಯೋಗ ಅರಸುತ್ತಿರುವವರು, ಹೆಚ್ಚುವರಿ ಸಂಪಾದನೆಗಾಗಿ ಪಾರ್ಟ್ ಟೈಮ್ ಕೆಲಸದ ತಲಾಷ್ ಮಾಡುತ್ತಿರುವವರನ್ನು ಗುರಿಯಾಗಿಸಿಕೊಂಡು ಹಲವರು ವಂಚನೆ ಮಾಡುತ್ತಿದ್ದಾರೆ. ಇಂಟರ್ ನೆಟ್ ಮೂಲಕ ಪ್ರತಿಷ್ಠಿತ ಕಂಪನಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸಲಾಗುತ್ತಿದೆ. ಉದ್ಯೋಗ ಆಕಾಂಕ್ಷಿಗಳು ಆಯಾ ಕಂಪನಿಗಳಿಗೆ ನೇರವಾಗಿ ತೆರಳಿ ಅಥವಾ ಅವರ ದೂರವಾಣಿ ನಂಬರ್’ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುವುದು ಸೂಕ್ತ. ಇದರಿಂದ ವಂಚಕರ ಜಾಲಕ್ಕೆ ಬೀಳುವುದು ತಪ್ಪಲಿದೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಸಿಗಂದೂರು ಲಾಂಚ್ ಅನಿರ್ದಿಷ್ಟಾವಧಿಗೆ ತಡೆದು ಪ್ರತಿಭಟಿಸುವ ಎಚ್ಚರಿಕೆ, ಕಾರಣವೇನು?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment