BREAKING NEWS | ದಸರಾ ಹಿನ್ನೆಲೆ, ಶಿವಮೊಗ್ಗದ 4 ರೈಲುಗಳಲ್ಲಿ ತಾತ್ಕಾಲಿಕವಾಗಿ ಬೋಗಿಗಳ ಹೆಚ್ಚಳ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

ಶಿವಮೊಗ್ಗ |ದಸರಾ ಹಬ್ಬದ (DASARA) ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ರೈಲುಗಳಲ್ಲಿ (TRAIN) ಬೋಗಿಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಶಿವಮೊಗ್ಗದ ರೈಲುಗಳಿಗು ತಾತ್ಕಲಿಕವಾಗಿ ಬೋಗಿಗಳನ್ನು ಹೆಚ್ಚಳ ಮಾಡಲಾಗಿದೆ. ಇದು ದಸರಾ ಹಬ್ಬದ ಸಂದರ್ಭಕ್ಕೆ ಮಾತ್ರ ಅನ್ವಯವಾಗಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Shimoga Nanjappa Hospital

ಯಾವ್ಯಾವ ರೈಲುಗಳಿಗೆ ಬೋಗಿ ಹೆಚ್ಚಳ?

ಮೈಸೂರು – ತಾಳಗುಪ್ಪ (TALAGUPPA) – ಮೈಸೂರು (MYSORE) ಎಕ್ಸ್ ಪ್ರೆಸ್ (EXPRESS) ರೈಲು (ಸಂಖ್ಯೆ 16227 / 16228) – ಒಂದು ಸಕೆಂಡ್ ಕ್ಲಾಸ್ (SECOND CLASS) ಸ್ಲೀಪರ್ ಬೋಗಿಯನ್ನು ಹೆಚ್ಚುವಾರಿ ಅಳವಡಿಸಲಾಗುತ್ತದೆ. ಮೈಸೂರಿನಿಂದ ಹೊರಡುವ ರೈಲಿಗೆ ಸೆ.26ರಿಂದ ಅಕ್ಟೋಬರ್ 5ರವರೆಗೆ, ತಾಳಗುಪ್ಪದಿಂದ ಹೊರಡುವ ರೈಲಿಗೆ ಸೆ.27ರಿಂದ ಅಕ್ಟೋಬರ್ 6ರವರೆಗೆ ಹೆಚ್ಚುವರಿ ಬೋಗಿ ಇರಲಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಪ್ರಯಾಣಿಕರೆ ಗಮನಿಸಿ – ರಾತ್ರಿ ಸಂಚರಿಸುವವರಿಗೆ ರೈಲ್ವೆ ಇಲಾಖೆಯಿಂದ ಅಲರಾಂ ಸೌಲಭ್ಯ, ಏನಿದು?

ಮೈಸೂರು – ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲು (ಸಂಖ್ಯೆ 16221/ 16222) – ಎರಡು  ಸಕೆಂಡ್ ಕ್ಲಾಸ್ ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತದೆ. ಮೈಸೂರಿನಿಂದ ಹೊರಡುವ ರೈಲಿಗೆ ಸೆ.26ರಿಂದ ಅಕ್ಟೋಬರ್ 5ರವರೆಗೆ, ತಾಳಗುಪ್ಪದಿಂದ ಹೊರಡುವ ರೈಲಿಗೆ ಸೆ.27ರಿಂದ ಅಕ್ಟೋಬರ್ 6ರವರೆಗೆ ಹೆಚ್ಚುವರಿ ಬೋಗಿ ಇರಲಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಅನಾಹುತ ತಪ್ಪಿಸಿದ ಮೈಸೂರು – ತಾಳಗುಪ್ಪ ರೈಲು ಸಿಬ್ಬಂದಿಗೆ ಸನ್ಮಾನ, ಏನಾಗಿತ್ತು?

ಮೈಸೂರು – ಶಿವಮೊಗ್ಗ – ಮೈಸೂರು ಎಕ್ಸ್ ಪ್ರೆಸ್ ರೈಲು (ಸಂಖ್ಯೆ 16225 / 16226) – ಎರಡು  ಸಕೆಂಡ್ ಕ್ಲಾಸ್ ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತದೆ. ಮೈಸೂರಿನಿಂದ ಹೊರಡುವ ರೈಲಿಗೆ ಸೆ.26ರಿಂದ ಅಕ್ಟೋಬರ್ 5ರವರೆಗೆ, ತಾಳಗುಪ್ಪದಿಂದ ಹೊರಡುವ ರೈಲಿಗೆ ಸೆ.28ರಿಂದ ಅಕ್ಟೋಬರ್ 7ರವರೆಗೆ ಹೆಚ್ಚುವರಿ ಬೋಗಿ ಇರಲಿದೆ.

ಶಿವಮೊಗ್ಗ – ಚಿಕ್ಕಮಗಳೂರು – ಶಿವಮೊಗ್ಗ ಪ್ಯಾಸೆಂಜರ್ ರೈಲು (07365 / 07366) – ಎರಡು  ಸಕೆಂಡ್ ಕ್ಲಾಸ್ ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತದೆ. ಶಿವಮೊಗ್ಗದಿಂದ ಹೊರಡುವ ರೈಲಿಗೆ ಸೆ.26ರಿಂದ ಅಕ್ಟೋಬರ್ 5ರವರೆಗೆ, ತಾಳಗುಪ್ಪದಿಂದ ಹೊರಡುವ ರೈಲಿಗೆ ಸೆ.28ರಿಂದ ಅಕ್ಟೋಬರ್ 7ರವರೆಗೆ ಹೆಚ್ಚುವರಿ ಬೋಗಿ ಇರಲಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ರೈಲ್ವೆ ಲೆವೆಲ್ ಕ್ರಾಸ್’ನಲ್ಲಿ ತಾಂತ್ರಿಕ ಪರಿಶೀಲನೆ, ವಾಹನಗಳಿಗೆ ಪರ್ಯಾಯ ಮಾರ್ಗ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment