ಶಿವಮೊಗ್ಗದಲ್ಲಿ ಜಂಬೂ ಸವಾರಿಗೆ ಕ್ಷಣಗಣನೆ, ಆನೆಗಳನ್ನು ನೋಡಲು ಜನವೋ ಜನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ದಸರಾ ಅಂಗವಾಗಿ ಶಿವಮೊಗ್ಗದಲ್ಲಿ ಇವತ್ತು ಜಂಬೂ ಸವಾರಿ (JAMBOO SAVARI) ಆಯೋಜಿಸಲಾಗಿದೆ. ಸಕ್ರೆಬೈಲು ಬಿಡಾರದಿಂದ ಮೂರು ಆನೆಗಳು ನಗರಕ್ಕೆ ಆಗಮಿಸಿವೆ. ಅವುಗಳನ್ನು ನೋಡಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಜನರು ಕೋಟೆ ರಸ್ತೆಗೆ ಅಗಮಿಸುತ್ತಿದ್ದಾರೆ.

Shimoga Nanjappa Hospital

ನಗರದ ವಾಸವಿ ಶಾಲೆ ಆವರಣದಲ್ಲಿ ಆನೆಗಳು ಬಿಡಾರ ಹೂಡಿವೆ. ಅಂಬಾರಿ ಹೊರಲು ಸಿದ್ಧವಾಗಿರುವ ಸಾಗರ, ಭಾನುಮತಿ ಮತ್ತು ನೇತ್ರಾವತಿ ಆನೆಗಳು ಆಗಮಿಸಿವೆ. ಇವುಗಳನ್ನು ನೋಡಲು ಜನರ ಶಾಲೆ ಬಳಿ ಬರುತ್ತಿದ್ದಾರೆ.

ಆನೆಗಳಿಂದ ದೂರ ದೂರ (JAMBOO SAVARI)

ಕಳೆದ ಭಾರಿ ಆನೆಗಳು ಆಗಮಿಸಿದ್ದಾಗ ವಾಸವಿ ಶಾಲೆ ಆವರಣದೊಳಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿತ್ತು. ಆದರೆ ಈ ಭಾರಿ ಆನೆಗಳಿಂದ ಜನರನ್ನು ದೂರ ನಿಲ್ಲಿಸಲಾಗುತ್ತಿದೆ. ಆನೆಗಳಿಗೆ ಬಳಿ ಯಾರೂ ಹೋಗದಂತೆ ನಿರ್ಬಂಧಿಸಲಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಲ್ಲಿ ವೈಭವದ ತುಂಗಾ ಆರತಿ, ಹೇಗಿತ್ತು ಪೂಜೆ? ಫೋಟೊ ನ್ಯೂಸ್

ಜನರು ಕಾಂಪೌಂಡ್ ಹೊರಗೆ ನಿಂತು ಆನೆಗಳನ್ನು ನೋಡಬೇಕಾಗಿದೆ. ಅಲ್ಲಿಂದಲೆ ಫೋಟೊ ಕ್ಲಿಕ್ಕಿಸಬೇಕಾಗಿದೆ. ಮಕ್ಕಳು, ಕುಟುಂಬದವರನ್ನು ಕರೆತಂದವರು ಆನೆಗಳ ಬಳಿಗೆ ಹೋಗಲಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಆದರೆ ಮುಂಜಾಗ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಅಲಂಕಾರ, ವೈದ್ಯಕೀಯ ಪರೀಕ್ಷೆ (JAMBOO SAVARI)

ಜಂಬೂ ಸವಾರಿ (JAMBOO SAVARI) ಹಿನ್ನೆಲೆ ಸಾಗರ, ಭಾನುಮತಿ ಮತ್ತು ನೇತ್ರಾವತಿ ಆನೆಗಳಿಗೆ ಇವತ್ತು ಅಲಂಕಾರ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಬೆಳಗ್ಗೆಯಿಂದಲೆ ಕಲಾವಿದರು ಆನೆಗಳಿಗೆ ಅಲಂಕಾರ ಆರಂಭಿಸಲಿದ್ದಾರೆ. ಈ ನಡುವೆ ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಮೊದಲು ವೈದ್ಯರಿಂದ ಪರಿಶೀಲನೆ ನಡೆಸುತ್ತಾರೆ. ಆ ಬಳಿಕ ಆನೆಗಳನ್ನು ರಸ್ತೆಗಿಳಿಸಲಾಗುತ್ತದೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ ನಗರ ಜಗಮಗ, ಎಲ್ಲೆಲ್ಲಿ ಹೇಗಿದೆ ವಿದ್ಯುತ್ ದೀಪಾಲಂಕಾರ?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment