ಮಲವಗೊಪ್ಪದಲ್ಲಿ ದಾಳಿ, ಮನೆ ಹಿತ್ತಲಲ್ಲಿ ಶೋಧ, ಒಬ್ಬ ಅರೆಸ್ಟ್, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಮಲವಗೊಪ್ಪದ ಮನೆ ಒಂದರ (RAID ON HOUSE) ಹಿತ್ತಲಿನಲ್ಲಿ ಶೋಧ ಕಾರ್ಯ ನಡೆಸಿದರು. ಒಂದು ಗಾಂಜಾ ಗಿಡ ಬೆಳೆಸಿದ್ದ ಆರೋಪ ಸಂಬಂಧ ಮನೆಯ ಯಜಮಾನನನ್ನು ಬಂಧಿಸಿದ್ದಾರೆ.

Shimoga Nanjappa Hospital

ಮಲವಗೊಪ್ಪದ ರಾಜಪ್ಪ ಎಂಬುವವರ ಮನೆ (RAID ON HOUSE) ಹಿತ್ತಲಿನಲ್ಲಿ ಶೋಧ ಕಾರ್ಯ ನಡೆಸಲಾಯಿತು. ಈ ವೇಳೆ ಹಿತ್ತಲಿನ ಪಕ್ಕದ ಖಾಲಿ ಜಾಗದಲ್ಲಿ ಒಂದು ಗಾಂಜಾ ಗಿಡ ಪತ್ತೆಯಾಗಿದೆ.

ಸುಮಾರು 10 ಅಡಿ ಎತ್ತರದ ಗಾಂಜಾ ಗಿಡವನ್ನು ವಶಕ್ಕೆ ಪಡೆಯಲಾಗಿದೆ. ಇದು ಸುಮಾರು 5 ಕೆ.ಜಿ ತೂಗುತ್ತಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮನೆಯ ವಾಸಿ ರಾಜಪ್ಪ ಎಂಬಾತನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಅಬಕಾರಿ ಇಲಾಖೆ ಮಂಗಳೂರು ವಿಭಾಗದ ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ಅಬಕಾರಿ ನಿರೀಕ್ಷಕ ಭೂಪತಿ.ಎಂ, ಉಪ ನಿರೀಕ್ಷಕಿ ರಾಜಮ್ಮ, ಸಿಬ್ಬಂದಿ ಶಶಿಧರ್, ಪಟೇಲ್, ಕರಿವೀರಪ್ಪ, ಅರುಣ್, ಸಂತೋಷ್ ಹಾಗೂ ನವೀನ್ ಪಾಲ್ಗೊಂಡಿದ್ದರು. ಮಲವಗೊಪ್ಪ ವೃತ್ತ ಲೆಕ್ಕಾಧಿಕಾರಿ ಪವಿತ್ರಾ, ನಗರ ಪಾಲಿಕೆ ಬಿಲ್ ಕಲೆಕ್ಟ್ ಹಾಲೇಶ್, ಗ್ರಾಮ ಸಹಾಯಕ ಸತೀಶ ದಾಳಿ ವೇಳೆ ಹಾಜರಿದ್ದರು.

baby props studio shimoga

ಕ್ಲಿಕ್ ಮಾಡಿ ಇದನ್ನೂ ಓದಿ ಅನುಮಾನಾಸ್ಪದವಾಗಿ ಮಂಗಗಳ ಸಾವು, ಗ್ರಾಮಸ್ಥರಲ್ಲಿ ಆತಂಕ, ಅಧಿಕಾರಿಗಳು ಸ್ಥಳಕ್ಕೆ ದೌಡು

ADVERTISEMENT (RAID ON HOUSE)

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment