ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಹೊಸ ಹೆಸರು ನಾಮಕರಣ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA |ಮೈಸೂರು – ತಾಳಗುಪ್ಪ ರೈಲಿಗೆ ರಾಷ್ಟ್ರಕವಿ ಕುವೆಂಪು (EXPRESS TRAIN) ಅವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇತ್ತ ರೈಲ್ವೆ ಇಲಾಖೆ ನಿರ್ಧಾರವನ್ನು ಸಂಸದ ರಾಘವೇಂದ್ರ ಸ್ವಾಗತಿಸಿದ್ದಾರೆ.

Shimoga Nanjappa Hospital

ರೈಲು ಸಂಖ್ಯೆ 16221 ಮತ್ತು 16222 ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ (EXPRESS TRAIN) ರೈಲಿಗೆ ರಾಷ್ಟ್ರಕವಿ ಕುವೆಂಪು ಎಕ್ಸ್ ಪ್ರೆಸ್ ಎಂದು ಹೆಸರಿಡಲಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಅನಾಹುತ ತಪ್ಪಿಸಿದ ಮೈಸೂರು – ತಾಳಗುಪ್ಪ ರೈಲು ಸಿಬ್ಬಂದಿಗೆ ಸನ್ಮಾನ, ಏನಾಗಿತ್ತು?

ರೈಲು ಸಂಖ್ಯೆ 16221 ತಾಳಗುಪ್ಪ ಮೈಸೂರು ರೈಲು ಬೆಳಗ್ಗೆ 6.15ಕ್ಕೆ ತಾಳಗುಪ್ಪದಿಂದ ಹೊರಡಲಿದೆ. ಬೆಳಗ್ಗೆ 8.20ಕ್ಕೆ ಶಿವಮೊಗ್ಗ ಆಗಮಿಸಲಿದೆ. ಮಧ್ಯಾಹ್ನ 3.35ಕ್ಕೆ ಮೈಸೂರು ತಲುಪಲಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಸಾಗರದಲ್ಲಿ ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲು ನಿಲುಗಡೆ ಸಮಯ ಹೆಚ್ಚಳ

ರೈಲು ಸಂಖ್ಯೆ 16222 ಮೈಸೂರು ತಾಳಗುಪ್ಪ ಎಕ್ಸ್ ಪ್ರೆಸ್. ಮಧ್ಯಾಹ್ನ 2 ಗಂಟೆಗೆ ಮೈಸೂರಿನಿಂದ ಹೊರಡಲಿದೆ. ರಾತ್ರಿ 8.35ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ರಾತ್ರಿ 11 ಗಂಟೆಗೆ ತಾಳಗುಪ್ಪ ತಲುಪಲಿದೆ.

Baby Props Studio Shimoga

ಸಂಸದ ರಾಘವೇಂದ್ರ ಅಭಿನಂದನೆ (EXPRESS TRAIN)

ರೈಲ್ವೆ ಇಲಾಖೆ ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ನಾಮಕರಣ ಮಾಡಿರುವುದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ. ‘ರೈಲ್ವೆ ಇಲಾಖೆ ಈ ಮೂಲಕ ರಾಷ್ಟ್ರಕವಿ ಕುವೆಂಪು ಅವರಿಗೆ ವಿಶೇಷವಾಗಿ ಗೌರವ ಸಲ್ಲಿಸಿದೆ. ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಅಭಿನಂದನೆ’ ಎಂದು ತಿಳಿಸಿದ್ದಾರೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಭಾರತ್ ಜೋಡೋ ಯಾತ್ರೆಗೆ ಶಿವಮೊಗ್ಗದ ಕಾರ್ಯಕರ್ತರು, ಯಾವ್ಯಾವ ದಿನ ಯಾವ ಕ್ಷೇತ್ರದವರು ಭಾಗಿ?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment