ಪಾರ್ಟ್ ಟೈಮ್ ಜಾಬ್ ಅಂತಾ ಮಹಿಳೆಗೆ 4.54 ಲಕ್ಷ ರೂ. ವಂಚನೆ, ಸ್ವಲ್ಪ ಯಾಮಾರಿದರು ಹಾಕ್ತಾರೆ ಟೋಪಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಪಾರ್ಟ್ ಟೈಮ್ ಉದ್ಯೋಗದ (PART TIME JOB) ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲಕ್ಷ ಲಕ್ಷ ರೂ. ವಂಚನೆ ಮಾಡಲಾಗಿದೆ. ಟಾಸ್ಕ್  (TASK) ಗಳನ್ನು ನೀಡಿ ಹಣದ ಆಸೆ ಹುಟ್ಟಿಸಿ ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga Nanjappa Hospital

ನರ್ಸಿಂಗ್ ಹೋಂ ಒಂದರಲ್ಲಿ ಮಹಿಳೆ (ಹೆಸರು ಗೌಪ್ಯ) ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಪಾರ್ಟ್ ಟೈಮ್ ಕೆಲಸದ ಹುಡುಕಾಟದಲ್ಲಿದ್ದರು. ಈ ವೇಳೆ INSTAGRAMಲ್ಲಿ ಪಾರ್ಟ್ ಟೈಮ್ ಕೆಲಸದ ಜಾಹೀರಾತು ಕಾಣಿಸಿದೆ. ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಮೊಬೈಲ್ ಗೆ ಟೆಲಿಗ್ರಾಂ ಲಿಂಕ್ ಬಂದಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಪಾಕಿಸ್ತಾನದ ಧ್ವಜ ಹಾರಾಟ ಅಂತಾ ವಿಡಿಯೋ ವೈರಲ್, ಪೊಲೀಸ್ ಇಲಾಖೆಯಿಂದ ವಾರ್ನಿಂಗ್

ಟೆಲಿಗ್ರಾಂನಲ್ಲಿ ವಿವಿಧ ಟಾಸ್ಕ್ ನೀಡಲಾಗಿದೆ. ಮೊದಲ ಟಾಸ್ಕ್ ಗೆ 100 ರೂ. ಪಾವತಿಸಬೇಕು ಎಂದು ತಿಳಿಸಲಾಗಿತ್ತು. ಮಹಿಳೆ ಅದನ್ನು ಕ್ಲಿಕ್ ಮಾಡಿ ಟಾಸ್ಕ್ (TASK) ಪೂರೈಸಿದ್ದಾರೆ. ಸೆ.27ರಿಂದ ಸೆ.30ರವರೆಗೆ ವಿವಿಧ ಹಂತದಲ್ಲಿ ಹಲವು ಟಾಸ್ಕ್ ನೀಡಲಾಯಿತು. ಪ್ರತಿ ಟಾಸ್ಕ್ ಗೆ ಇಂತಿಷ್ಟು ಹಣ ಪಾವತಿಸಬೇಕು ಎಂದು ಸೂಚಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ ಜಿಲ್ಲೆಯಾದ್ಯಂತ ಅ.31ರವರೆಗೆ ಜಾನುವಾರು ಜಾತ್ರೆ, ಜಾನುವಾರು ಸಾಗಾಣೆ ನಿಷೇಧ, ಕಾರಣವೇನು?

ಮಹಿಳೆ 4.54 ಲಕ್ಷ ರೂ. ಹಣ ಪಾವತಿಸಿ ಟಾಸ್ಕ್ ಪೂರೈಸಿದ್ದಾರೆ. ಆದರೆ ಈತನಕ ಯಾವುದೆ ಲಾಭಾಂಶ ನೀಡದ ಹಿನ್ನೆಲೆ ಅನುಮಾನಗೊಂಡಿದ್ದಾರೆ. ವಂಚನೆಗೊಳಗಾಗಿರುವುದು ಗೊತ್ತಾಗುತ್ತಿದ್ದಂತೆ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಸಂಬಳ ಕೊಡುವವರೇಕೆ ಹಣ ಕೇಳುತ್ತಾರೆ? TASK

ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ಆನ್ ಲೈನ್ ನಲ್ಲಿ ಹಲವು ವಂಚನೆಗಳಾಗುತ್ತಿವೆ. ಈ ಕುರಿತು ಸಾರ್ವಜನಿಕರು ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಸದಾ ಜಾಗೃತಿ ಮೂಡಿಸುತ್ತಿರುತ್ತದೆ. ವಂಚಕರು ಪ್ರತಿಷ್ಠಿತ ಕಂಪನಿಗಳ ಹೆಸರು ಬಳಸಿ, ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ಹಣದ ಆಸೆ ಮೂಡಿಸಿ ವಂಚಿಸುತ್ತಾರೆ. ಸಂಬಳ ನೀಡುವವರು ಹಣ ಪಾವತಿಸಿ ಕೆಲಸ ನೀಡುವುದಿಲ್ಲ. ಇನ್ನಾದರೂ ಇಂತಹ ವಂಚಕ ಜಾಲದ ಕುರಿತು ಜನರು ಎಚ್ಚರ ವಹಿಸಬೇಕಿದೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ನಟ ವಿನೋದ್ ಪ್ರಭಾಕರ್, ಗಾಯಕ ಆಲ್ ಓಕೆ ನೋಡಲು ಮುಗಿಬಿದ್ದ ಅಭಿಮಾನಿಗಳು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment