ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS
THIRTHAHALLI | ಹಾಡಹಗಲೆ ಶಾಲಾ ಬಾಲಕಿಯೊಬ್ಬಳ ಅಪಹರಣಕ್ಕೆ (KIDNAP ATTEMPT) ಯತ್ನಿಸಲಾಗಿದೆ. ಆದರೆ ಇಬ್ಬರು ವಿದ್ಯಾರ್ಥಿಗಳ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದಾಗಿ ಅಪಹರಣ ವಿಫಲವಾಗಿದೆ.

ತೀರ್ಥಹಳ್ಳಿ ಪಟ್ಟಣ ಸಮೀಪದ ಮೇಲಿನಕುರುವಳ್ಳಿಯ ಕಡಿದಾಳು ಮಂಜಪ್ಪ ಸರ್ಕಲ್ ಬಳಿ ಗುರುವಾರ ಘಟನೆ ಸಂಭವಿಸಿದೆ. ನೀಲಿ ಬಣ್ಣದ ಮಾರುತಿ ಓಮ್ನಿ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಬಾಲಕಿಯ ಅಪಹರಣಕ್ಕೆ ಪ್ರಯತ್ನಿಸಿದ್ದಾರೆ.
(KIDNAP ATTEMPT)
ಚಾಕೊಲೆಟ್ ಕೊಡುವ ನೆಪ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೆ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದಳು. ದಾರಿಯಲ್ಲಿ ಚಾಕೊಲೆಟ್ ಕೊಡುವ ನೆಪದಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯ ಕೈ ಹಿಡಿದು ಎಳೆಯುತ್ತಿದ್ದ.
(KIDNAP ATTEMPT)
ರಕ್ಷಣೆಗೆ ನಿಂತ ವಿದ್ಯಾರ್ಥಿಗಳು
ಸಮೀಪದಲ್ಲಿ ನಡೆದು ಬರುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಕೂಡಲೆ ವಿದ್ಯಾರ್ಥಿನಿಯ ನೆರವಿಗೆ ನಿಂತಿದ್ದಾರೆ. ವಿದ್ಯಾರ್ಥಿನಿಯ ಕೈ ಹಿಡಿದು ಎಳೆದುಕೊಂಡಿದ್ದಾರೆ. ಒಬ್ಬ ವಿದ್ಯಾರ್ಥಿ ಬಾಲಕಿಯ ಕೈ ಹಿಡಿದು ಎಳೆಯುತ್ತಿದ್ದರೆ, ಇನ್ನೊಬ್ಬ ವಿದ್ಯಾರ್ಥಿ ಅಪಹರಣಕಾರರತ್ತ ಕಲ್ಲು ತೂರಿದ್ದಾನೆ. ಅಲ್ಲದೆ ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಿದ್ದಾರೆ.
(KIDNAP ATTEMPT)
ಸ್ಥಳದಿಂದ ದುಷ್ಕರ್ಮಿಗಳು ಪರಾರಿ
ವಿದ್ಯಾರ್ಥಿಗಳು ಜೋರಾಗಿ ಕೂಗಿಕೊಂಡಿದ್ದರಿಂದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ನೀಲಿ ಬಣ್ಣದ ಮಾರುತಿ ಓಮ್ನಿ ಕಾರಿನಲ್ಲಿ ಬಂದಿದ್ದರು ಎಂದು ವಿದ್ಯಾರ್ಥಿನಿಯ ರಕ್ಷಣೆ ಮಾಡಿದ ಬಾಲಕರು ತಿಳಿಸಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಸಮೀಪದ ಅಂಗಡಿಗಳ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದರು. ಇದರಲ್ಲಿ ನೀಲಿ ಬಣ್ಣದ ಓಮ್ನಿ ಕಾರು ಸಂಚರಿಸಿರುವುದು ಗೊತ್ತಾಗಿದೆ.
ಅಪಹರಣಕಾರರು ಮುಖಕ್ಕೆ ಮಾಸ್ಕ್ ಧರಿಸಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ಪೋಷಕರಿಗೆ ಧೈರ್ಯ ಹೇಳಿದ್ದು, ಗಸ್ತು ಹೆಚ್ಚಳ ಮಾಡಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ | ‘ಹಿಂದೂ ಧರ್ಮದ ಕ್ಷಮೆ ಕೇಳಿ ಚುನಾವಣೆಗೆ ನಿಲ್ಲಲಿ, ಇಲ್ಲವಾದಲ್ಲಿ ಎಲ್ಲೇ ಸ್ಪರ್ಧಿಸಿದರು ಅವರು ಸೋಲುತ್ತಾರೆ’
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
LATEST NEWS
- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

About The Editor
ನಿತಿನ್ ಆರ್.ಕೈದೊಟ್ಲು





