‘ನಿಖಿಲ್ ಎಲ್ಲಿದ್ದೀಯಪ್ಪ’ಕ್ಕೆ ಈಶ್ವರಪ್ಪ ಕೊಟ್ಟರು ಉತ್ತರ, ಮಧು ಎಲ್ಲಿದ್ದೀಯಪ್ಪ ಅಂತಾ ಶಿಕಾರಿಪುರದಲ್ಲಿ ಪ್ರಶ್ನಿಸಿದರು ನಟಿ ತಾರಾ

ಶಿವಮೊಗ್ಗ ಲೈವ್.ಕಾಂ | 17 ಏಪ್ರಿಲ್ 2019

ಶಿಕಾರಿಪುರದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲೂ ‘ನಿಖಿಲ್ ಎಲ್ಲದ್ದಿಯಪ್ಪ’ ಸೌಂಡ್ ಮಾಡಿದೆ. ಪ್ರಚಾರ ಸಭೆಯ ವೇದಿಕೆಯಲ್ಲೇ, ಶಾಸಕ ಕೆ.ಎಸ್.ಈಶ್ವರಪ್ಪ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯೆ, ನಟಿ ತಾರಾ ಈ ಡೈಲಾಗ್ ಪ್ರಸ್ತಾಪಿಸಿ, ಜೆಡಿಎಸ್ ಮತ್ತು ಅದರ ಅಭ್ಯರ್ಥಿಗಳನ್ನು ವ್ಯಂಗ್ಯ ಮಾಡಿದರು.

ಜಾತ್ರೆಯಲ್ಲಿದ್ದೀನಪ್ಪ ಅನ್ನಬೇಕಾಗುತ್ತೆ?

ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಶಿಕಾರಿಪುರದಲ್ಲಿ ಇವತ್ತು ಬಿಜೆಪಿ ವತಿಯಿಂದ ಬಹಿರಂಗ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ, ನಿಖಿಲ್ ಎಲ್ಲಿದ್ದಿಯಪ್ಪ ಅನ್ನೋ ಡೈಲಾಗ್ ಪ್ರಸ್ತಾಪಿಸಿದ ಶಾಸಕ ಕೆ.ಎಸ್.ಈಶ್ವರಪ್ಪ, ಚುನಾವಣೆ ಮುಗಿದ ಬಳಿಕ ನಿಖಿಲ್ ಬಿಜೆಪಿಯವರ ಸಂಭ್ರಮದ ಜಾತ್ರೆ ಮಧ್ಯೆ ಇದ್ದೀನಪ್ಪ ಅನ್ನಬೇಕಾಗುತ್ತೆ ಎಂದು ವ್ಯಂಗ್ಯವಾಡಿದರು.

Kalleshwara-Enterprises.webp

ಚುನಾವಣೆ ಬಳಿ ಫಾರಿನ್’ನಲ್ಲಿದ್ದೀನಪ್ಪ..!

ಶಾಸಕ ಈಶ್ವರಪ್ಪ ಅವರಿಗಿಂತಲೂ ಒಂದು ಹೆಜ್ಜೆ ಮುಂದೆಕ್ಕೆ ಹೋದ ನಟಿ ತಾರಾ, ನಿಖಿಲ್ ಎಲ್ಲಿದ್ದೀಯಪ್ಪ ಡೈಲಾಗ್ ಬಳಸಿಕೊಂಡು, ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ವ್ಯಂಗ್ಯ ಮಾಡಿದರು. ಚುನಾವಣೆ ಬಳಿಕ ಮಧು ಎಲ್ಲಿದ್ದೀಯಪ್ಪ ಅಂತಾ ಕೇಳಿದರೆ, ಅಣ್ಣ ಫಾರಿನ್’ನಲ್ಲಿದ್ದೀನಿ ಅಂತಾ ಹೇಳುವ ಪರಿಸ್ಥಿತಿ ಬರಲಿದೆ ಎಂದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment