ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 26 NOVEMBER 2022
SHIMOGA | ಮದುವೆಯಾಗಲು ವಧು ಹುಡುಕಿಕೊಡಿ ಎಂದು ಮ್ಯಾಟ್ರಿಮೋನಿಗೆ ಜಾತಕ ತಲುಪಿಸಿವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ವಧು ಹುಡುಕಿಕೊಡುವಂತೆ ಮನವಿ ಮಾಡಿ ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾನೆ. ಈತ ಪೊಲೀಸರಿಗೆ ಸಲ್ಲಿಸಿರುವ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (Marriage Memorandum)

ಭದ್ರಾವತಿಯ ಪ್ರವೀಣ್ ಎಂಬಾತ ವಧು ಹುಡುಕಿಕೊಡುವಂತೆ ಜಿಲ್ಲಾ ರಕ್ಷಣಾಧಿಕಾರಿಗೆ ಅವರಿಗೆ ಮನವಿ ಮಾಡಿದ್ದಾನೆ. ಮನವಿ ಪತ್ರದ ಜೊತೆಗೆ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿರುವುದಾಗಿ ತಿಳಿಸಿದ್ದಾನೆ.
(Marriage Memorandum)
ವಧು ಅನ್ವೇಷಣೆ ಮನವಿಯಲ್ಲಿ ಏನಿದೆ?
ವಧು ಅನ್ವೇಷಣೆಯ ಮನವಿ ಪತ್ರದಲ್ಲಿ ಪ್ರವೀಣ್, ತನ್ನ ಪೂರ್ವಪರ ತಿಳಿಸಿದ್ದಾನೆ. ‘ತಮ್ಮ ತಂದೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ತಂದೆ ತೀರಿಕೊಂಡಿದ್ದಾರೆ. ತಾಯಿ ಇದ್ದಾರೆ. ಅಣ್ಣನಿಗೆ ಮದುವೆಯಾಗಿದೆ.’ ಎಂದು ತಿಳಿಸಿದ್ದಾನೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ತಲೆ ಎತ್ತಲಿದೆ ಟ್ರಕ್ ಟರ್ಮಿನಲ್, ಎರಡು ಕಡೆ ಸ್ಥಳ ಪರಿಶೀಲನೆ, ಏನೇನಿರುತ್ತೆ ಅಲ್ಲಿ?
ಇನ್ನು, ‘ತಾನು ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಬಳಿಕ ಚಿಟ್ಸ್ ಫಂಡ್ಸ್ ಸಂಸ್ಥೆಯಲ್ಲಿ ಕೆಲಕಾಲ ಕೆಲಸ ನಿರ್ವಹಿಸಿದ್ದೆ. ಈಗ ಭದ್ರಾವತಿಯಲ್ಲಿರುವ ತಮ್ಮ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇನೆ. ವಧು ಅನ್ವೇಷಣೆಯಲ್ಲಿ ಯಾವುದು ಸರಿಹೋಗದ ಹಿನ್ನೆಲೆ ನಮ್ಮ ಜಾತಿಗೆ ಸಂಬಂಧಿಸಿದವರು ತಮ್ಮ ಅಧೀನದಲ್ಲಿರುವ ಯಾರಾದರು ಇದ್ದರೆ ತಿಳಿಸಿ. ಈ ಮೂಲಕ ತಾನು ವಿವಾಹ ಮಾಡಿಕೊಳ್ಳಲು ಸಹಾಯ ಮಾಡಿ’ ಎಂದು ಮನವಿ ಮಾಡಿದ್ದಾನೆ.
(Marriage Memorandum)
ಬೇಕಿದ್ದರೆ ಹಿನ್ನಲೆ ಪರಿಶೀಲಿಸಿಕೊಳ್ಳಿ
ಇನ್ನು, ಮನವಿ ಪತ್ರದ ಕೊನೆಯಲ್ಲಿ ಪ್ರವೀಣ್ ತನಗೆ ಪರಿಚಿತ ನಗರಸಭೆ ಸದಸ್ಯ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಹೆಸರನ್ನು ಬರೆದಿದ್ದಾನೆ. ‘ತನ್ನ ಹಿನ್ನೆಲೆ ಕುರಿತು ಮಾಹಿತಿ ಬೇಕಿದ್ದರೆ ಇವರನ್ನು ವಿಚಾರಿಸಬಹುದು. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ ಲಗತ್ತಿಸಿದ್ದು, ಹೆಚ್ಚಿನ ಮಾಹಿತಿ ಬೇಕಿದ್ದರೆ ತಿಳಿದುಕೊಳ್ಳಬಹುದು’ ಎಂದು ತಿಳಿಸಿದ್ದಾನೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಕಾರು, ಬಸ್ ಮುಖಾಮುಖಿ ಡಿಕ್ಕಿ, ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್ ಜಾಮ್
ನ.14ರಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ಈ ಮನವಿ ಪತ್ರವನ್ನು ಪ್ರವೀಣ್ ತಲುಪಿಸಿದ್ದಾನೆ. ಈಗ ಇದು ವೈರಲ್ ಆಗಿದೆ.

ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






