ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 DECEMBER 2022
ಶಿವಮೊಗ್ಗ : ಬಹು ನಿರೀಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ಎಲ್ಲವು ಅಂದುಕೊಂಡ ಹಾಗೆ ಆದರೆ, 2023ರ ಫೆಬ್ರವರಿಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ. (INSIDE SHIMOGA AIRPORT)
ವಿಮಾನ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ. ವಿಮಾನ ನಿಲ್ದಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ವಿಮಾನ ನಿಲ್ದಾಣದಲ್ಲಿ ಏನೇನೆಲ್ಲ ಸಿದ್ಧವಾಗಿದೆ. ಅದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
(INSIDE SHIMOGA AIRPORT)
ಟರ್ಮಿನಲ್ ಗೆ ಫೈನಲ್ ಟಚ್
ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ಸಿದ್ಧವಾಗಿದೆ. ಇದು ಅತ್ಯಾಧುನಿಕ ಮತ್ತು ಅಪ್ ಗ್ರೇಡ್ ಆಗಿರುವ ತಂತ್ರಜ್ಞಾನ ಹೊಂದಿರಲಿದೆ. ತಾಂತ್ರಿಕವಾಗಿ ಈ ಟರ್ಮಿನಲ್ 20 ರಿಂದ 25 ವರ್ಷ ಮುಂದಿರಲಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಟರ್ಮಿನಲ್ ಹೊರಭಾಗದ ಕೆಲಸಗಳು ಮುಗಿದಿವೆ. ಒಳಾಂಗಣದ ಕಾರ್ಯಗಳು ನಡೆಯುತ್ತಿವೆ.
ALSO READ – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶದ ವಿಚಾರ, ಸಂಸದ ರಾಘವೇಂದ್ರ ಮಹತ್ವದ ಹೇಳಿಕೆ
ಚೆಕ್ ಇನ್, ಸೆಕ್ಯೂರಿಟಿ ಕ್ಲಿಯರೆನ್ಸ್, ಪಾಸ್ ಪೋರ್ಟ್ ಪರಿಶೀಲನೆ, ವೇಯ್ಟಿಂಗ್ ಏರಿಯಾ, ಕಸ್ಟಮ್ಸ್ ಸೇರಿದಂತೆ ವಿವಿಧ ಕಚೇರಿಗಳು ಈ ಟರ್ಮಿನಲ್ ನಲ್ಲಿ ಕಾರ್ಯ ನಿರ್ವಹಿಸಲಿದೆ.
(INSIDE SHIMOGA AIRPORT)
ರಾಂಪ್, ಏರ್ ಕ್ರಾಫ್ಟ್ ಸ್ಟಾಂಡ್
ಟರ್ಮಿನಲ್ ಪಕ್ಕದಲ್ಲಿ ವಿಮಾನಗಳ ನಿಲುಗಡೆಗೆ ರಾಂಪ್ ಸಿದ್ಧವಾಗಿದೆ. ಇದರ ಕಾಮಗಾರಿ ಕೂಡ ಅಂತಿಮ ಹಂತದಲ್ಲಿದೆ. ಕಾಂಕ್ರೆಟ್ ಮೂಲಕ ರಾಂಪ್ ನಿರ್ಮಿಸಲಾಗಿದೆ. ಇಲ್ಲಿಯೇ ವಿಮಾನಗಳ ಸ್ಟಾಂಡ್ ಕೂಡ ಇರಲಿದೆ. ವಿಮಾನಗಳು ಲ್ಯಾಂಡ್ ಆದ ಬಳಿಕ ರನ್ ವೇಯಿಂದ ರಾಂಪ್ ಕಡೆಗೆ ಬರಲಿದೆ. ಪ್ರಯಾಣಿಕರು ವಿಮಾನ ಇಳಿದು ಟರ್ಮಿನಲ್ ಗೆ ಬರಬೇಕಾಗುತ್ತದೆ.
ALSO READ – ಶಿವಮೊಗ್ಗಕ್ಕೆ ಜಪಾನ್ ಕಾನ್ಸುಲ್ ಡೆಪ್ಯೂಟಿ ಜನರಲ್, ಹೂಡಿಕೆ ಕುರಿತು ಚರ್ಚೆ, ವಿಮಾನ ನಿಲ್ದಾಣಕ್ಕೆ ಭೇಟಿ
(INSIDE SHIMOGA AIRPORT)
ರನ್ ವೇ, ಟ್ಯಾಕ್ಸಿ ವೇ
ರಾಜ್ಯದಲ್ಲಿ ಅತಿ ದೊಡ್ಡ ರನ್ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಇದಾಗಿದೆ. 3,200 ಮೀಟರ್ ಉದ್ದದ ರನ್ ವೇ ಕಾಮಗಾರಿ ಪೂರ್ಣಗೊಂಡಿದೆ. ಫ್ಲೈಟ್ ಸ್ಟಾಂಡ್ ನಿಂದ ರನ್ ವೇಗೆ ತೆರಳುವ ಟ್ಯಾಕ್ಸಿ ವೇ ಕೂಡ ಪೂರ್ಣಗೊಂಡಿದೆ. ಇವುಗಳ ಅಂತಿಮ ಹಂತದ ಕಾರ್ಯಗಳು ನಡೆಯುತ್ತಿವೆ. ರಾತ್ರಿ ಹೊತ್ತಿನಲ್ಲಿಯು ವಿಮಾನಗಳ ಲ್ಯಾಂಡಿಂಗ್ ಗೆ ವ್ಯವಸ್ಥೆ ಇರಲಿದೆ.
ALSO READ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ದೆಹಲಿಯಿಂದ ಅಧಿಕಾರಿಗಳ ತಂಡ, ಉದ್ಘಾಟನೆಗೆ ಬರ್ತಾರೆ ಪ್ರಧಾನಿ
ಏರ್ ಟ್ರಾಫಿಕ್ ಕಂಟ್ರೋಲ್ ಸೆಂಟರ್
ವಿಮಾನ ಹಾರಾಟ ನಿಯಂತ್ರಣಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್ (ATC) ಸೆಂಟರ್ ನಿರ್ಮಿಸಲಾಗಿದೆ. ಇಲ್ಲಿಂದಲೆ ನಿಯಂತ್ರಕರು ವಿಮಾನವನ್ನು ನಿಯಂತ್ರಿಸುತ್ತಾರೆ. ಈಗಾಗಲೆ ATC ಕಟ್ಟಡ ಸಿದ್ಧವಾಗಿದೆ. ಇದರ ಹೊರಾಂಗಣ ಮತ್ತು ಒಳಾಂಗಣ ಕೆಲಸಗಳು ನಡೆಯುತ್ತಿವೆ. ನುರಿತ ತಂತ್ರಜ್ಞರು ಇದರ ತಾಂತ್ರಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
10 ವಾಚ್ ಟವರ್
ವಿಮಾನ ನಿಲ್ದಾಣದ ರಕ್ಷಣೆಗೆ ದೊಡ್ಡ ಕಾಂಪೌಂಡ್ ಮತ್ತು ಅದರ ಮೇಲೆ ತಂತಿ ಬೇಲಿ ಅಳವಡಿಸಲಾಗಿದೆ. ಅಲ್ಲದೆ ಕಾಂಪೌಂಡ್ ಸುತ್ತಲು 10 ವಾಚ್ ಟವರ್ ನಿರ್ಮಾಣ ಮಾಡಲಾಗಿದೆ. ರಾಜ್ಯ ಕೈಗಾರಿಕ ಭದ್ರತಾ ಪಡೆಗೆ (KSISF) ಭದ್ರತೆಯ ಉಸ್ತುವಾರಿ ವಹಿಸುವ ಸಾಧ್ಯತೆ ಇದೆ. ಭದ್ರತಾ ಸಿಬ್ಬಂದಿಗೆ ಬಿಸಿಲು, ಮಳೆಯಿಂದ ರಕ್ಷಣೆಗೆ ಕಾಂಕ್ರಿಟ್ ವಾಚ್ ಟವರ್ ಗಳಲ್ಲಿ ಸ್ಥಾಪಿಸಲಾಗಿದೆ. ಮೂಲ ಸೌಕರ್ಯವು ಇದರಲ್ಲಿ ಇರಲಿದೆ.
ಏರ್ ಪೋರ್ಟ್ ರಸ್ತೆ
ಕಾಚಿನಕಟ್ಟೆ ಬಳಿ ವಿಮಾನ ನಿಲ್ದಾಣದ ಮುಖ್ಯ ಗೇಟ್ ಸ್ಥಾಪಿಸಲಾಗಿದೆ. ಅಲ್ಲಿಂದ ಟರ್ಮಿನಲ್ ವರೆಗೆ ಯಾವುದೆ ಅಡೆತಡೆ ಇಲ್ಲದೆ ಸಾಗಲು ಎರಡು ಬದಿ ರಸ್ತೆ ನಿರ್ಮಿಸಲಾಗಿದೆ. ನಿಲ್ದಾಣದಲ್ಲಿ ಸಿಬ್ಬಂದಿ ಓಡಾಟಕ್ಕೆ ಅನುಕೂಲವಾಗಲು ಕಾಂಪೌಂಡ್ ಸುತ್ತಲು ರಸ್ತೆ ನಿರ್ಮಿಸಲಾಗಿದೆ. ಇನ್ನು, ಶಿವಮೊಗ್ಗದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 13 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕಾಗಿ ಎರಡು ವಿದ್ಯುತ್ ಸಬ್ ಸ್ಟೇಷನ್ ಸ್ಥಾಪಿಸಲಾಗುತ್ತಿದೆ. ಟರ್ಮಿನಲ್ ಬಿಲ್ಡಿಂಗ್ ಮುಂಭಾಗ ವಾಹನಗಳ ಪಾರ್ಕಿಂಗ್ ಗೆ ವಿಶಾಲ ವ್ಯವಸ್ಥೆ ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422