ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 DECEMBER 2022
ಶಿವಮೊಗ್ಗ : ಗುಜರಾತ್ ಚುನಾವಣೆಯಲ್ಲಿ (gujarat election results) ಬಿಜೆಪಿ 8ನೇ ಬಾರಿಗೆ ಗೆಲುವು ಸಾಧಿಸಿದ ಹಿನ್ನಲೆ ಜಿಲ್ಲಾ ಬಿಜೆಪಿ ಕಛೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿದರು.
ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು ಪಕ್ಷದ ಪರ, ಪ್ರಧಾನ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಪರವಾಗಿ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಎಸ್.ದತ್ತಾತ್ರಿ, ಗುಜರಾತ್ ಗೆಲುವು ದೇಶದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ನೈತಿಕ ಬಲ ಬಂದಿದೆ. ಕರ್ನಾಟಕದಲ್ಲಿ ಇದೇ ರೀತಿ ಜಯಭೇರಿ ಭಾರಿಸಲಿದ್ದೇವೆ ಎಂದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬಿಜೆಪಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ (gujarat election results) 150ಕ್ಕೂ ಹೆಚ್ಚು ಸ್ಥಾನ ಗಳಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಗರಿಗೆದರಿದೆ. ಪ್ರಧಾನಿ ಮೋದಿಯವರು ಕೇವಲ ಒಂದು ವರ್ಗಕ್ಕೆ ಯೋಚಿಸದೆ ಇಡೀ ದೇಶದ ಎಲ್ಲಾ ವರ್ಗಕ್ಕೂ ಸೌಲಭ್ಯ ಕಲ್ಪಿಸಿದ್ದಾರೆ ಎಂದರು.
ಇದನ್ನೂ ಓದಿ – ಕ್ಷೇತ್ರ ಪರಿಚಯ | ಶಿವಮೊಗ್ಗ ಕ್ಷೇತ್ರ, ಜಾತಿ ಲೆಕ್ಕಾಚಾರ ತಲೆ ಕೆಳಗಾಗಿಸಿದ ಕ್ಷೇತ್ರ, ಹಿನ್ನೆಲೆ ಏನು?
ಈ ಸಂದರ್ಭ ಪ್ರಮುಖರಾದ ಚನ್ನಬಸಪ್ಪ, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಸುನಿತಾ ಅಣ್ಣಪ್ಪ, ಸುರೇಖಾ ಮುರುಳೀಧರ್, ಜ್ಞಾನೇಶ್ವರ್, ಈ.ವಿಶ್ವಾಸ್, ಪ್ರಭು, ಅಣ್ಣಪ್ಪ, ಅಲ್ಲಾಭಕ್ಷ್, ವಿನ್ಸೆಂಟ್ ಡಿಸೋಜಾ, ರತ್ನಾಕರ್ ಶೆಣೈ, ಜಿಲ್ಲಾ ಯುವ ಮೋರ್ಛಾ ಅಧ್ಯಕ್ಷ ಹರಿಕೃಷ್ಣ ಮತ್ತಿತರರಿದ್ದರು.