SHIVAMOGGA LIVE NEWS | 19 DECEMBER 2022
ಶಿವಮೊಗ್ಗ : ಕಾರಿಗೆ ಬೆಂಕಿ ಹಚ್ಚಿದ್ದ ಪ್ರಕರಣ ಸಂಬಂಧ ಬಂಧಿಸಿಲು ತೆರಳಿದ್ದಾಗ ಪೊಲೀಸರ ಮೇಲೆ ಆರೋಪಿಯೊಬ್ಬ ದಾಳಿ ಮಾಡಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು (police firing) ಹಾರಿಸಿದ್ದಾರೆ. ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಮತ್ತು ಆರೋಪಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರವೀಣ್ ಅಲಿಯಾಸ್ ಮೋಟು ಪ್ರವೀಣ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇವತ್ತು ಬೆಳಗ್ಗೆ ಪ್ರವೀಣನನ್ನು ಬಂಧಿಸಲು ಪೊಲೀಸರ ತಂಡ ತೆರಳಿತ್ತು. ಈ ವೇಳೆ ಪೊಲೀಸ್ ಸಿಬ್ಬಂದಿ ಶಿವರಾಜು ಅವರ ಮೇಲೆ ಆರೋಪಿ ಪ್ರವೀಣ ದಾಳಿ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್ಐ ರಮೇಶ್ ಅವರು ಗಾಳಿಯಲ್ಲಿ ಗುಂಡು (police firing) ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಬಳಿಕ ಪ್ರವೀಣನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಶಿವರಾಜು ಮತ್ತು ಆರೋಪಿ ಪ್ರವೀಣನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಪೊಲೀಸ್ ಸಿಬ್ಬಂದಿ ಶಿವರಾಜು ಅವರನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆರೋಪಿ ಪ್ರವೀಣನನ್ನು ಮೆಗ್ಗಾನ್ ಆಸ್ಪತ್ರೆಯ ಜೈಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
ಆರೋಪಿ ಪ್ರವೀಣನ ವಿರುದ್ಧ ಕೊಲೆ ಯತ್ನ, ಮಾದಕ ವಸ್ತುಗಳ ಸಂಬಂಧ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ಪ್ರಕರಣಗಳು ದಾಖಲಾಗಿವೆ.
(police firing)
ಮೂರು ದಿನದ ಹಿಂದೆ ಕಾರಿಗೆ ಬಂಕಿ
ಕೊಲೆ ಯತ್ನ ಕೇಸ್ ಹಿಂಪಡೆಯುವಂತೆ ಬೆದರಿಕೆಯೊಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಆರೋಪಿಗಳು ಬೆಂಕಿ ಹಚ್ಚಿದ್ದಾರೆ. ಶಿವಮೊಗ್ಗದ ಜೈಲ್ ರಸ್ತೆಯಲ್ಲಿ ಶನಿವಾರ ಬೆಳಗಿನ ಜಾವ ನಡೆದಿತ್ತು. ವನಜಾಕ್ಷಿ ಎಂಬವವರ ಮಗಳಿಗೆ ಸೇರಿದ ಕಾರಿಗೆ ಬೆಂಕಿಗೆ ಆಹುತಿಯಾಗಿತ್ತು. ಕಾರಿನಲ್ಲಿ ಸುಮಾರು 30 ಸಾವಿರ ರೂ. ನಗದು ಹಣವಿತ್ತು. ಅದು ಕೂಡ ಸುಟ್ಟು ಹೋಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
(police firing)
ಕೇಸ್ ವಾಪಸ್ ಗೆ ಬೆದರಿಕೆ
ವನಜಾಕ್ಷಿ ಅವರು ಜೈಲ್ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿದ್ದಾರೆ. ಮೂರು ತಿಂಗಳ ಹಿಂದೆ ಅಂಗಡಿಗೆ ಬಂದಿದ್ದ ಪ್ರವೀಣ್, ಕಾರ್ತಿಕ್, ನಿತೇಶ್ ಮತ್ತು ಇತರರು ವಜನಾಕ್ಷಿ ಅವರ ಮೇಲೆ ದಾಳಿ ಮಾಡಿದ್ದರು. ಗಾಜಿನ ಲೋಟದಿಂದ ಹೊಡೆದು ಕೊಲೆಗೆ ಯತ್ನಿಸಿದ್ದರು ಎಂದು ಆರೋಪಿಸಿ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗಳು ಜೈಲಿಗೆ ಹೋಗಿದ್ದು, ಹೈಕೋರ್ಟ್ ನಲ್ಲಿ ಜಾಮೀನು ಪಡೆದು ಬಂದಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ
ಜೈಲಿನಿಂದ ಬಿಡುಗಡೆಯಾದ ಮೇಲೆ ಪ್ರವೀಣ, ವಿಶಾಲ್, ನಿತೇಶ್, ಸಚಿನ್, ವನಜಾಕ್ಷಿ ಅವರ ಮನೆ ಮುಂದೆ ಬೈಕಿನಲ್ಲಿ ಓಡಾಡುತ್ತ ಭಯಪಡಿಸಲು ಯತ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ BOSS IS WAITING FOR KILLING ಎಂದು ಫೋಟೊ ಪ್ರಕಟಿಸಿದ್ದರು ಎಂದ ವನಜಾಕ್ಷಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ನಡುರಾತ್ರಿ ಕರೆ ಮಾಡಿ ಬೆಂಕಿ ಇಟ್ಟರು
ವನಜಾಕ್ಷಿ ಅವರ ಮಗಳು ಊರಿಗೆ ಹೋಗಬೇಕಿದ್ದಿದ್ದರಿಂದ ಕಾರನ್ನು ಇಲ್ಲಿಯೇ ನಿಲ್ಲಿಸಿದ್ದರು. ಡಿ.17ರಂದು ಮಧ್ಯರಾತ್ರಿ 3 ಗಂಟೆಗೆ ವನಜಾಕ್ಷಿ ಅವರ ಮಗನಿಗೆ ಕರೆ ಮಾಡಿದ ಆರೋಪಿಗಳು, ಮನೆಯಿಂದ ಹೊರಗೆ ಬರುವಂತೆ ಬೆದರಿಕೆ ಒಡ್ಡಿದ್ದಾರೆ. ಆದರೆ ವನಜಾಕ್ಷಿ ಅವರ ಮಗ ಹೊರಗೆ ಹೋಗಲಿಲ್ಲ. ಕೊನೆಗೆ ಆರೋಪಿಗಳು ಕಲ್ಲಿನಿಂದ ಹೊಡೆದು ಕಾರಿನ ಗಾಜು ಜಖಂಗೊಳಿಸಿದ್ದಾರೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕೆಲವೇ ನಿಮಿಷದಲ್ಲಿ ಕಾರು ಸುಟ್ಟು ಕರಕಲಾಗಿದೆ ಎಂದು ವನಜಾಕ್ಷಿ ಅವರು ದೂರಿನಲ್ಲಿ ಆಪಾದಿಸಿದ್ದಾರೆ.
ಇದನ್ನೂ ಓದಿ –ಶಿವಮೊಗ್ಗ ಜಿಲ್ಲೆಯಾದ್ಯಂತ 20 ಚೆಕ್ ಪೋಸ್ಟ್, ಪೊಲೀಸರಿಂದ ದಿಢೀರ್ ಕಾರ್ಯಾಚರಣೆ, 46 ಜನರ ವಿರುದ್ಧ ಕೇಸ್
ಕಾರು ಬೆಂಕಿಗೆ ಆಹುತಿಯಾಗಿರುವುದರಿಂದ 12 ಲಕ್ಷ ರೂ. ನಷ್ಟವಾಗಿದೆ. ಕಾರಿನಲ್ಲಿ 30 ಸಾವಿರ ರೂ. ನಗದು ಇತ್ತು. ಅದು ಕೂಡ ಸುಟ್ಟು ಹೊಗಿದೆ ಎಂದು ತಿಳಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200