ಮೈಸೂರು, ಬೆಂಗಳೂರು, ಹುಬ್ಬಳ್ಳಿ ಮಾದರಿ ಶಿವಮೊಗ್ಗದಲ್ಲಿಯು ಕ್ಷೇಮ ಕೇಂದ್ರಕ್ಕೆ ಮನವಿ, ಏನಿದು ಕೇಂದ್ರ?

SHIVAMOGGA LIVE NEWS | 21 DECEMBER 2022

ಶಿವಮೊಗ್ಗ : ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗಿರುವ ಕ್ಷೇಮ ಕೇಂದ್ರವನ್ನು (wellness centre) ಶಿವಮೊಗ್ಗದಲ್ಲಿಯು ಸ್ಥಾಪಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.

Shimoga Nanjappa Hospital

ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರನ್ನು ಭೇಟಿಯಾದ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲೆಯಲ್ಲಿ ಕ್ಷೇಮ ಕೇಂದ್ರ (wellness centre) ಆರಂಭಿಸಿದರೆ ರಾಜ್ಯ ಸರ್ಕಾರದಿಂದ ಮೂಲ ಸೌಕರ್ಯ ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವೊಲಿಸುವುದಾಗಿ ಮನವರಿಕೆ ಮಾಡಿದರು.

 35 ಸಾವಿರ ಜನಕ್ಕೆ ಅನುಕೂಲ 
ಜಿಲ್ಲೆಯಲ್ಲಿ 35 ಸಾವಿರ ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರಿದ್ದಾರೆ. ತುರ್ತು ಸಂದರ್ಭ ಇವರಿಗೆ ಚಿಕಿತ್ಸೆ ಪಡೆಯಲು ತೊಂದರೆಯಾಗುತ್ತಿದೆ. ಕ್ಷೇಮ ಕೇಂದ್ರ ಆರಂಭಿಸಿದರೆ ಅವರಿಗೆ ಅನುಕೂಲ ಆಗಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಇದನ್ನೂ ಓದಿ – ಶಿವಮೊಗ್ಗದ ಈ ಆಟೋ ಈಗ ‘ಪುನೀತ ರಥ’, ಚಾಲಕನ ಮನೆ, ಮನ, ಮೊಬೈಲ್ ತುಂಬಾ ಅಪ್ಪು ಅಮರ

Shimoga Nanjappa Hospital

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment