SHIVAMOGGA LIVE NEWS | 1 JANUARY 2023
ಹಾಯ್ ಹಲೋ.. ಎಲ್ಲರಿಗು ಹ್ಯಾಪ್ ನ್ಯೂ ಇಯರ್..
ಹೋದ ವರ್ಷ, ಅದರ ಹಿಂದಿನ ವರ್ಷ ಏನೇನೆಲ್ಲ ಕಂಡಿದ್ದೇವೆ. ಎಷ್ಟೆಲ್ಲ ಕಷ್ಟ ಅನುಭವಿಸಿದ್ದೀವಿ. ನಮ್ಮೆಲ್ಲರ ಕಷ್ಟಗಳನ್ನ ದೇವರು ದೂರ ಮಾಡಲಿ ಅಂತಾ ಕೇಳಿಕೊಳ್ತೀವಿ. (new year)
ಈ ವರ್ಷ ಎಲ್ಲರು ಖುಷಿ ಖುಷಿಯಾಗಿರಲಿ ಅಂತಾ ಖುಷಿಯ ವಿಚಾರವನ್ನ ಮೊದಲು ಷೇರ್ ಮಾಡ್ತಿದ್ದೀವಿ. ನೀವೆ ಬೆಳೆಸಿದ ಶಿವಮೊಗ್ಗ ಲೈವ್ 2022ರಲ್ಲಿ ದೊಡ್ಡ ಸಂಖ್ಯೆಯ ಓದುಗರನ್ನ ರೀಚ್ ಆಗಿದೆ. ಇಡೀ ವರ್ಷದಲ್ಲಿ ನಾವು 19.70 ಲಕ್ಷ ಓದುಗರನ್ನ ತಲುಪಿದ್ದೀವಿ. 1.44 ಕೋಟಿ ಸರ್ತಿ ನಮ್ಮ ವೆಬ್ ಸೈಟ್ ಓಪನ್ ಆಗಿದೆ. ಅಂದರೆ 1.44 ಕೋಟಿ ಪೇಜ್ ವಿವ್ಸ್ ಆಗಿದೆ. ಡಿಸೆಂಬರ್ ತಿಂಗಳು ಒಂದರಲ್ಲೇ, 7.20 ಲಕ್ಷ ಓದುಗರ ಮೊಬೈಲ್, ಕಂಪ್ಯೂಟರ್, ಟ್ಯಾಬ್ ಗಳಲ್ಲಿ ಶಿವಮೊಗ್ಗ ಲೈವ್ ವೆಬ್ ಸೈಟ್ 3 ಮಿಲಿಯನ್ ಗಿಂತಲು ಹೆಚ್ಚು ಸರ್ತಿ ಓಪನ್ ಆಗಿದೆ. (new year)
ಇದಕ್ಕೆಲ್ಲ ಕಾರಣ ನೀವು. ಹಾಗಾಗಿ ನಿಮ್ಮೊಂದಿಗೆ ಈ ಖುಷಿ ವಿಚಾರ ಹಂಚಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ.
‘ಇದೆಲ್ಲ ಇರಲಿ, ಮುಂದೇನು ಮಾಡ್ತೀರ? ರಾಜಕಾರಣಿಗಳ ಹೇಳಿಕೆ, ಒಂದಷ್ಟು ಕ್ರೈಮ್ ಸುದ್ದಿ, ಅವು, ಇವು ಕಾರ್ಯಕ್ರಮಗಳ ನ್ಯೂಸ್ ಗಳನ್ನೇ ಹಾಕ್ತಾ ಇರ್ತೀರೋ, ಬೇರೆನಾರೂ ಮಾಡ್ತೀರೋ?’ ಅಂತಾ ಮನಸಲ್ಲೆ ಕೇಳಿಕೊಳ್ತಿದ್ದೀರ ತಾನೆ..? ಇವತ್ತು ಅದೆ ವಿಚಾರ ಹೇಳೋಕಾಗಿ ನಿಮ್ಮ ಮುಂದೆ ಬಂದು ನಿಂತಿದ್ದೀವಿ.
ನಮ್ಮದು ಸಣ್ಣ ಸಂಸ್ಥೆ. ಸಾಲದ ಹೊರೆ, ಸಿಬ್ಬಂದಿ ಕೊರತೆ. ಹಾಗಂತ ಸುದ್ದಿ ಹಾಕೋಕೆ ಹಣ ಕೇಳುವವರು ನಾವಲ್ಲ. ಇವತ್ತು ಲಕ್ಷ ಲಕ್ಷ ಜನ ಜೊತೆಗೆ ನಿಂತಿದ್ದೀರ ಅಂದರೆ ಅದಕ್ಕಿಂತಲು ಧೈರ್ಯ ಮತ್ತೇನಿದೆ. ಹಾಗಾಗಿ ಇನ್ನೊಂದಷ್ಟು ಸಾಹಸಕ್ಕೆ ಕೈ ಹಾಕ್ತಿದ್ದೀವಿ. ಹಳ್ಳಿ ಹಳ್ಳಿಯ ವಿಚಾರಗಳನ್ನು ಜಗತ್ತಿಗೆ ತಿಳಿಸಬೇಕಿದೆ. ನೀವು ಮೊಬೈಲ್ ಆನ್ ಮಾಡಿದ ಕೂಡಲೆ ‘ವಾವ್..’ ಅಂತಾ ಆಶ್ಚರ್ಯ ಪಡುವ ಸುದ್ದಿಗಳು ಅಲ್ಲಿ ಬಂದು ಕಾದು ಕೂತಿರುವ ಹಾಗೆ ಮಾಡಬೇಕು ಅನ್ನೋ ಯೋಚನೆ ಇದೆ. (new year)
ನೀವು ನಮ್ಮ ಜೊತೆಗಿರ್ತೀರ ಅನ್ನೊ ನಂಬಿಕೆಯಲ್ಲೆ ಹೊಸ ವರ್ಷಕ್ಕೆ ಮತ್ತೊಂದು ದೊಡ್ಡ ಹೆಜ್ಜೆ ಇಡ್ತಿದ್ದೀವಿ. ಸದ್ಯದಲ್ಲೆ ಎಲ್ಲವನ್ನು ಪೂರ್ತಿಯಾಗಿ ಹೇಳ್ತೀವಿ. ಮತ್ತೊಂದು ವಿಚಾರ, ಶಿವಮೊಗ್ಗ ಲೈವ್ ನಲ್ಲಿ ನೀವು ಏನೇನಲ್ಲ ಓದೋಕೆ ಇಷ್ಟ ಪಡ್ತೀರ ಅನ್ನೋದನ್ನ shivamoggalive@gmail.com ಗೆ ಈ ಮೇಲ್ ಮಾಡಿ. ಶಿವಮೊಗ್ಗ ಜಿಲ್ಲೆಯ ಯಾವುದೆ ಹಳ್ಳಿಯ ಸುದ್ದಿ ಇದ್ದರು ಮೇಲ್ ಮೂಲಕ ಕಳುಹಿಸಿ. ನಮ್ಮ ಮೊಬೈಲ್ ನಂಬರ್ ನಿಮಗೆಲ್ಲ ಗೊತ್ತಿದೆ. ಆದರೂ ಮತ್ತೆ ಹೇಳ್ತೀವಿ 7411700200. ಇದರಲ್ಲಿ ವಾಟ್ಸಪ್ ಕೂಡ ಇದೆ. ಅಲ್ಲೂ ಸಿಕ್ತೀವಿ.
ಸುದ್ದಿಗಳು, ನಮ್ಮ ಹೊಸ ಯೋಚನೆ ಚನ್ನಾಗಿದ್ದರೆ ಬೆನ್ನು ತಟ್ಟಿ. ತಪ್ಪಾಗಿದ್ದರೆ ಯಾವ ಮುಲಾಜಿಲ್ಲದೆ ಬೈದು ಹೇಳಿ..
ಮತ್ತೆ ಸಿಗೋಣ..
- ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ 3 ದಿನ ಫಲಪುಷ್ಪ ಪ್ರದರ್ಶನ, ಈ ವರ್ಷದ ವಿಶೇಷತೆ ಏನು?
- 2022ರಲ್ಲಿ ಅಪ್ಲೋಡ್ ಆಗಿದ್ದ ವಿಡಿಯೋ, ಶಿವಮೊಗ್ಗದ ಯುವಕನಿಗೆ ಈಗ ಶುರು ಸಂಕಷ್ಟ
- ಅಡಿಕೆ ಧಾರಣೆ | 22 ಜನವರಿ 2025 | ಇವತ್ತು ಯಾವ್ಯಾವ ಅಡಿಕೆ ಎಷ್ಟಿದೆ ರೇಟ್?
- ಸೈನ್ಸ್ ಮೈದಾನ, ಸಂಜೆ ಪಾರ್ಕಿಂಗ್ ಸ್ಥಳಕ್ಕೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ
- ಇನ್ಮುಂದೆ ಕಾಗೋಡು ತಿಮ್ಮಪ್ಪ, ಡಾಕ್ಟರ್ ಕಾಗೋಡು ತಿಮ್ಮಪ್ಪ
- ಕುವೆಂಪು ವಿವಿ, 84 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಹೇಗಿತ್ತು 34ನೇ ಘಟಿಕೋತ್ಸವ?