BREAKING NEWS | ಹೊಸ ವರ್ಷದ ಪಾರ್ಟಿ ವೇಳೆ ಗನ್ ಫೈರ್, ಯುವಕನಿಗೆ ಗಾಯ, ಗುಂಡು ಹಾರಿಸಿದವ ಸಾವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS |1 JANUARY 2023

ಶಿವಮೊಗ್ಗ : ಹೊಸ ವರ್ಷದ ಪಾರ್ಟಿ ವೇಳೆ ಗುಂಡು (gun fire) ತಗುಲಿ ಯುವಕನೊಬ್ಬ ಗಾಯಗೊಂಡಿದ್ದಾನೆ. ಗುಂಡು ಹಾರಿಸಿದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಗರದ ವಿದ್ಯಾನಗರದಲ್ಲಿರುವ ಮಂಜುನಾಥ ಓಲೇಕರ್ ಎಂಬುವವರ ಮನೆಯಲ್ಲಿ ಪಾರ್ಟಿ ನಡೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಕುಟುಂಬದವರೊಂದಿಗೆ ಹೊಸ ವರ್ಷಾಚರಣೆ ಮಾಡುತ್ತಿದ್ದರು. 12 ಗಂಟೆಗೆ ಮಂಜುನಾಥ ಓಲೇಕರ್ ಅವರು ತಮ್ಮ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಮಿಸ್ ಫೈರ್, ಯುವಕನಿಗೆ ಗುಂಡು (gun fire)

ಮಂಜುನಾಥ ಓಲೇಕರ್ ಅವರು ಹಾರಿಸಿದ ಗುಂಡು ಮಿಸ್ ಫೈರ್ ಆಗಿದೆ. ಪಾರ್ಟಿ ಮಾಡುತ್ತಿದ್ದ ಯುವಕನಿಗೆ ಗುಂಡು ತಗುಲಿ, ಗಂಭೀರ ಗಾಯಗೊಂಡಿದ್ದಾನೆ. ಕೂಡಲೆ ಯುವಕನನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಇದನ್ನೂ ಓದಿ – ಇನ್ಮುಂದೆ ಎಲ್ಲೆಂದರಲ್ಲಿ ಸಿಟಿ ಬಸ್ ನಿಲ್ಲಿಸುವಂತಿಲ್ಲ, ಶಿವಮೊಗ್ಗದಲ್ಲಿ 117 ಬಸ್ ಸ್ಟಾಪ್ ಗುರುತಿಸಿ ಅಧಿಸೂಚನೆ ಪ್ರಕಟ

ಗಾಬರಿಯಿಂದ ಹೃದಯಾಘಾತ (gun fire)

ಯುವಕನಿಗೆ ಗುಂಡು ತಗುಲುತ್ತಿದ್ದಂತೆ ಮಂಜುನಾಥ ಓಲೇಕರ್ ಅವರು ಆತಂಕಕ್ಕೀಡಾಗಿದ್ದಾರೆ. ಹೃದಯಾಘಾತ ಸಂಭವಿಸಿ, ಮೃತಪಟ್ಟಿದ್ದಾರೆ. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment