ತನ್ನ ಮನೆ ಇರುವ ರಸ್ತೆಯಲ್ಲೆ ಮನೆ ಕಳ್ಳತನ ಮಾಡಿದ್ದ ಆರೋಪಿ ಒಂದು ತಿಂಗಳ ಬಳಿಕ ಲಕ್ಷ ಲಕ್ಷ ವಸ್ತು ಸಹಿತ ಸಿಕ್ಕಿಬಿದ್ದ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS |3 JANUARY 2023

ಶಿವಮೊಗ್ಗ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಎಗ್ಸಾಸ್ಟ್ ಫ್ಯಾನ್ (exhaust fan) ಮುರಿದು ಒಳ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಒಟ್ಟು 8 ಮನೆ ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಚಿನ್ನಾಭರಣ ಸೇರಿ 7.77 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಅಣ್ಣಾನಗರ 1ನೇ ಅಡ್ಡರಸ್ತೆಯ ನಿವಾಸಿ ಸದ್ದಾಂ (31) ಬಂಧಿತ. ಅದೆ ರಸ್ತೆಯ ಬಸವರಾಜಪ್ಪ ಎಂಬುವವರ ಮನೆಯಲ್ಲಿ ಸದ್ದಾಂ ಕಳ್ಳತನ ಮಾಡಿದ್ದ.

ಎಗ್ಸಾಸ್ಟ್ ಫ್ಯಾನ್ ಮುರಿದು ಕಳವು

ನ.28ರಂದು ಬಸವರಾಜಪ್ಪ ಅವರು ಪತ್ನಿಯೊಂದಿಗೆ ತಮ್ಮ ತೋಟಕ್ಕೆ ತೆರಳಿದ್ದರು. ಡಿ.2ರಂದು ಮರಳಿ ಬಂದಾಗ ಮನೆ ಬಾಗಿಲು ಹಾಕಿದಂತೆಯೆ ಇತ್ತು. ಬೆಡ್ ರೂಂಗೆ ಹೊದಾಗ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪರಿಶೀಲಿಸಿದಾಗ ಎಗ್ಸಾಸ್ಟ್ ಫ್ಯಾನ್ (exhaust fan) ಮುರಿದು ಯಾರೋ ಒಳಗೆ ಪ್ರವೇಶ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸದ್ದಾಂನನ್ನು ಬಂಧಿಸಿದ್ದಾರೆ.

ಎಂಟು ಕಳ್ಳತನ ಕೇಸ್ ಬಯಲಿಗೆ

ದೊಡ್ಡಪೇಟೆ ಠಾಣೆ ಪೊಲೀಸರು ಸದ್ದ್ದಾಂನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತ 8 ಮನೆಗಳ್ಳತನ ಪ್ರಕರಣ ಬಾಯಿಬಿಟ್ಟಿದ್ದಾನೆ. ಬಂಧಿತನಿಂದ 7.22 ಲಕ್ಷ ರೂ. ಮೌಲ್ಯದ 144.50 ಗ್ರಾಂ ತೂಕದ ಚಿನ್ನಾಭರಣ, 21,700 ರೂ. ಮೌಲ್ಯದ 310 ಗ್ರಾಂ ತೂಕದ ಬೆಳ್ಳಿ ವಸ್ತುಗಳು, ಒಂದು ಮೊಬೈಲ್ ಫೋನ್, ಒಂದು ವಾಚ್, 2 ಟಿವಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ 7.77 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ – ದುರ್ಗಿಗುಡಿಯಲ್ಲಿ ಕಾರಿನಲ್ಲಿದ್ದ ಮೊಬೈಲ್ ಸ್ಪೋಟ, ಚಾಲಕನ ಸೀಟಿಗೆ ಬೆಂಕಿ

ದೊಡ್ಡಪೇಟೆ ಠಾಣೆ ಇನ್ಸ್ ಪೆಕ್ಟರ್ ಅಂಜನ್ ಕುಮಾರ್, ಪಿಎಸ್ಐ ವಂಸತ್, ಮಂಜಮ್ಮ, ಪ್ರೊಬೆಷನರಿ ಪಿಎಸ್ಐಗಳಾದ ಕೃಷ್ಣಕುಮಾರ್ ಮಾನೆ, ಸೈಲ್ ಕೆಂಚಣ್ಣವರ್, ಎಎಸ್ಐ ಚಂದ್ರಶೇಖರ್, ಸಿಬ್ಬಂದಿ ಹೆಚ್.ಸಿ ಪಾಲಾಕ್ಷನಾಯ್ಕ್, ಸಿ.ಪಿ.ಸಿ ಗುರುನಾಯ್ಕ್, ಶಶಿಧರ್ ಸಿ, ಚಂದ್ರಾನಾಯ್ಕ್, ಮನೋಹರ್, ನಿತಿನ್, ರಮೇಶ್ ಅವರು ತಂಡ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment